"ಗುಣ"

ಹೊತ್ತು ಸಾಗೋದು ಏನು ಇಲ್ಲ.....
ಬಿಟ್ಟು ಹೋಗೋದೆ ,ಇಲ್ಲೇ ಎಲ್ಲಾ.....
ಕಿತ್ತು ತಿನ್ನದೆ ಕಂಡ ಕಂಡವರನ್ನೆಲ್ಲಾ
ಕೊಟ್ಟುತಿನ್ನು ಭಗವಂತ ನಿನಗೆ ಕೊಟ್ಟಷ್ಟರಿಂದ!
ಹಣೆ ಬರಹಕೆ ಹೊಣೆಯಾರು ಇಲ್ಲ
ಬ್ರಹ್ಮನಲ್ಲದೆ ಹಣೆಬರಹವ ಬರೆಯೋರಾರು ಅಲ್ಲ.....
ಬರೆದಷ್ಟೆ ಪಡೆಯೋದು
ಅದರಾಚೆ ,ನಿನ್ನಾಸೆಗೆ ನೀ ಬಲಿಯಾಗದೆ ಇರು!
ಸಿರಿ ಅನ್ನೋದು ಗರಿ ಗರಿಯ ನೋಟುಗಳಲಿ ಅಲ್ಲ
ಇಹುದು ನಿನ್ನ ಗುಣದಲಿ......ಗರಿ ಗರಿಯ ನೋಟು
ಸುಟ್ಟರೆ ಬೂದಿಯಾದೀತು......ಗುಣ ಅನ್ನೋದು ಸುಟ್ಟ
ಮೇಲೂ ಸುಡದೇ ,ಅವರಿವರ ಮನದಲಿ ಅಳಿಯದೆ ಉಳಿಬಹುದು

- ಅಜೀತ್

10 May 2018, 05:03 pm
Download App from Playstore: