ಮತ್ತೆ ಮೋಡ ಕವಿಯಾಗಲಿಲ್ಲ
ಮಕರಂದ ಹೀರಲು ಪತಂಗ ಹಾರಿ ಬಂತು
ಆದರೆ ಹೂ ಸುವಾಸನೆ ಬೀರಲಿಲ್ಲ
ಭುವಿಯ ತಂಪಾಗಿಸಲು ಸಿಡಿಲು ಆರ್ಭಟಿಸಿತು
ಆದರೆ ಮಳೆ ಬರಲಿಲ್ಲ
ಸಂಗಾತಿಯ ಮೆಚ್ಚಿಸಲು ಹೃದಯ ಹಾಡಿತು
ಆದರೆ ಸಂಗಾತಿ ಲೆಕ್ಕಿಸಲಿಲ್ಲ
ನಾಟ್ಯವ ಸವಿಯಲು ಮೋಡ ಕವಿದಿತ್ತು
ಆದರೆ ನವಿಲು ನರ್ತಿಸಲಿಲ್ಲ
ಕೊನೆಗೊಮ್ಮೆ ಬೇಸರಗೊಂಡು
ಪತಂಗ ಹಾರಿ ಬರಲಿಲ್ಲ
ಸಿಡಿಲು ಆರ್ಭಟಿಸಲಿಲ್ಲ
ಹೃದಯ ಹಾಡಲಿಲ್ಲ
ಮೋಡ ಕವಿಯಲಿಲ್ಲ
*ಮತ್ತೆ ಮೋಡ ಕವಿಯಾಗಲಿಲ್ಲ*
- ಬೊಳ್ಳಿ ಬೊಲ್ಪು
13 May 2018, 10:50 am
Download App from Playstore: