ಜೂಜಾಟ
ಪಾಂಚಾಲಿಯ ಸೀರೆಯ
ಸೆಳೆದರದು ಅಂದಿನ ಮಹಾಭಾರತ
ನಾಯಕರಿಗೆ ಆಮಿಷ ಒಡ್ಡಿ
ಸೆಳೆಯುತಿಹರು ಇದು ಇಂದಿನ ಭಾರತ
ತಿಳಿದು ತಿಳಿಯದಂತೆ ಕೂತಿದೆ
ನಮ್ಮ ಈ ಕಾರ್ಯಂಗ
ಸರ್ವಾಧಿಕಾರ- ಪ್ರಜಾಪ್ರಭುತ್ವ
ಎರಡು ಒಂದೆ ಅಂಗ
ಭಯೋತ್ಪಾದಕರಿಗು-
ಭಾರತದ ನಾಯಕರಿಗು-
ಇಲ್ಲ ಅಣುವಷ್ಟು ವತ್ಯಾಸ
ತ್ಯಾಜ್ಯ ತೆಗೆಯುವವರೆ
ತ್ಯಾಜ್ಯದ ನಿಮ್ರಾತೃಗಳಾದರೆ
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದವರೆ ಭ್ರಷ್ಟಾಚಾರಿಗಳಾದರೆ
ಬೇಲಿಯೆ ಎದ್ದು ಹೊಲ ಮೇಯ್ದರೆ
ರಕ್ಷಿಸುವರಾರು ಭಾರತಮಾತೆಯ
ಹಣ ಪಡೆದು ಮತ ನೀಡದಿರಿ
ಎನ್ನುವರು ನಮ್ಮ ನಾಯಕರು
ಹಣ ಪಡೆದು ಮತ ನೀಡಿದರೆ
ಅದು ಭ್ರಷ್ಟಾಚಾರ
ಕೋಟಿ- ಕೋಟಿ ನೀಡಿ
ಕೊಂಡರೆ ಇದು ಯಾವ ಆಚಾರ?
ಶಕುಂತಲಾ
- ಶಕುಂತಲಾ
17 May 2018, 10:40 am
Download App from Playstore: