ನಿಜವಾದ ದೇಶ ಪ್ರೇಮಿ
ದೇಶದ ನಿಜವಾದ ದೇಶಪ್ರೇಮಿ
ದೇಶದ ಗಡಿಕಾಯುವ ಸಿಪಾಯಿ..
ದೇಶಸೇವೆಗೆ ಗರ್ವಪಡುವ ಗವಾಯಿ ಇವನು
ತಾಯ್ನಾಡಿನ ರಕ್ಷಣೆಗೆ ಪ್ರಾಣ ಕೊಡುವ ತ್ಯಾಗಮಯಿ ಇವನು.. " ಪ "
ದೇಶಪ್ರೇಮಿಯ ರಕ್ಷಿಸುವ ಧೀರ ಇವನು
ದೇಶದ್ರೋಹಿಯ ಸಂಹರಿಸುವ ವೀರ ಇವನು..
ನಡೆಸುವನು ಕಠಿಣ ಸಮರಾಭ್ಯಾಸ
ಆಗುವನು ಉಕ್ಕಿನ ಶರೀರದ ಮನುಷ..
ಪ್ರತಿಕ್ಷಣ ಎಚ್ಚರ
ಗನ್ನು ಕ್ಷೀಪಣಿ ಪಿರಂಗಿ ಇವನ ಅಸ್ತ್ರ
ತನುಮನ ದೇಶಪ್ರೇಮದ ಮಂತ್ರ..
ಘೋರ ಕದನಕೂ ಸಿದ್ಧ
ವೀರ ಮರಣಕೂ ಬದ್ಧ..
ದೇಶದಲ್ಲಿ ಶಾಂತಿ ಐಕ್ಯ ಕಾಪಾಡುವ ಧ್ಯೇಯ ಇವನದು..
ಊರನ್ನು ರಕ್ಷಿಸುವ ಶೂರ ಇವನು
ಉಗ್ರನನ್ನು ಬೇಟೆಯಾಡುವ ವ್ಯಾಘ್ರ ಇವನು
ನೆಲ ಜಲ ಗಾಳಿಯಲ್ಲಿ
ಬೆಂಕಿ ಗುಂಡು ಸಿಡಿದು ಬರಲಿ
ಇವ ನುಗ್ಗುವ ಪರಿ ಚಿರತೆಯೇ ಸರಿ..
ಕೊರೆಯೋ ಚಳಿಗೆ ನಡುಗದೆ
ಗುಡುಗೋ ಮಳೆಗೆ ಬಗ್ಗದೆ
ಇವ ಘರ್ಜಿಸುವ ಪರಿ ಸಿಂಹವೇ ಸರಿ..
ರಕ್ತ ಸುರಿಯಲಿ ಮಾಂಸ ಖಂಡ ಉದುರಲಿ
ಇವ ಬಿಡನು ತನ್ನ ಗುರಿ..
ನಗುತ ಪ್ರಾಣ ಬಿಡುವನಿವನು ವಿಜಯ ಪತಾಕೆ ಹಾರಿಸಿ..
ಇವನ ತ್ಯಾಗ ಬಲಿದಾನವನ್ನು ಸ್ಮರಿಸಿ ವಂದಿಸುವ ಕರ್ತವ್ಯ ನಮ್ಮದು..
- ಸುರೇಶ್ ಟಿ ವಿ
20 May 2018, 10:59 am
Download App from Playstore: