ಬೆಳದಿಂಗಳು

೧.ಕಣ್ಣ ಕಾಂತಿ

ಬೆಳದಿಂಗಳಿಗೂ ನಿನ್ನ ಕಣ್ಣ
ಕಾಂತೀಯೆ ಬೇಕಂತೆ
ಬೇಡಿದರದು ಮರುಗಿ
ಮಾರುಹೋಗದಿರು ಕಾಂತೆ
ಸಾವನೆ ನೋಡದಿರಬಹುದು
ನನ್ನ ಬಾಳ ಅಂತೆ ಕಂತೆ ಚಿಂತೆ
ಬೆಳಗಲಿರದೆ ನಿನ್ನ ಹಸನ್ಮುಖಿ
ಕಂಗಳೊಳಗಿನ ಹಣತೆ

***************************


೨.ನೋವಿನ ಹಂದರ

ಕನಸಿಗೆ ಕನ್ನ ಹಾಕುತಿವೆ
ನೋವಿನ ಹಂದರ
ಸೋಲೂ ನನಗೀಗ
ಹಿಂಬಾಲಿಸೊ ಸಹೋದರ
ಬೇಡವೆಂದು ದೂರ ಸರಿಸಲಾಗದೆ
ಮನಕೆ ಬೇಸರ
ಅನಿಸುತಿದೆ ಯಮಪಾಶವು
ಅತಿ ಸುಂದರ
ಬಾಳ ಬೆಳಗೊ ಬೆಳದಿಂಗಳ‌
ಸೂಸಲಾಗುವುದೆ ಚಂದಿರ
ಕತ್ತಲೊಳಗೆ ನರಳುತಿದೆ
ಮನಸಿನ ಮಂದಿರ

- ಶ್ರೀಕಾವ್ಯ

22 May 2018, 07:53 pm
Download App from Playstore: