ಕಸವೇ ಖಾಯಿಲೆಗೆ ಮೂಲ
ಕಸವೇ ಖಾಯಿಲೆಗೆ ಮೂಲ
ಸ್ವಚ್ಛತೆಯೇ ಆರೋಗ್ಯಕ್ಕೆ ಬಲ..
ಮನೆ ಬೀದಿ ಕಸವನ್ನೆಲ್ಲ
ಒಂದೆಡೆ ಸೇರಿಸಬೇಕಲ್ಲ..
ಕಸದ ವಾಹನ ಬಂದಾಗೆಲ್ಲಾ
ಕಸವ ಸುರಿಯಬೇಕಲ್ಲ.. " ಪ "
ಪ್ಲಾಸ್ಟಿಕ್ ರಕ್ಕಸ ಕಣೋ
ಕಸವೇ ವಿಷ ಕಣೋ..
ಎಲ್ಲೆಂದರಲ್ಲಿ ನೀ ಎಸೆಯ ಬ್ಯಾಡ ಬ್ಯಾಡ
ಹಳದಿ ಡಬ್ಬ ಒಣ ಕಸಕೆ
ಹಸಿರು ಡಬ್ಬ ಹಸಿ ಕಸಕೆ..
ಸ್ವಚ್ಛತಾ ಆಂದೋಲನದಲ್ಲಿ ನೀ ಭಾಗಿ ಆಗು ಆಗಿರು..!!
ಕಸದ ನಿರ್ಮೂಲನೆ
ರೋಗದ ನಿರ್ಮೂಲನೆ
ಸ್ವಚ್ಛತಾ ಪಾಲನೆ ನೀ ಬಿಡಲೇ ಬ್ಯಾಡ ಬ್ಯಾಡ..
ನಾಡು ನಮ್ಮದೇ
ದೇಶವು ನಮ್ಮದೇ
ಅಂದು ಕೊಂಡು ನೀ ಬಾಳು ಬಾಳು ಓ..!!
- ಸುರೇಶ್ ಟಿ ವಿ
25 May 2018, 12:32 pm
Download App from Playstore: