ತಂಗಾಳಿಯೇ...
ಅಪ್ಪುವೆಯೇಕೆ ತಂಗಾಳಿಯೇ
ಸುಖಸುಮ್ಮನೆ ಹೀಗೆ
ಇನಿಯನೇ ಬಳಿ ಬಂದು
ರಮಿಸಿ ಮುದ್ದಿಸಿದ ಹಾಗೆ
ಮುಂಗುರಳೇನು ಜೋಕಾಲಿಯೇ
ಆಡಿ ನಲಿಯಲು ನಿನಗೆ
ಹೇಳದೆ ಕೇಳದೆ ಜೀಕಿ
ಮರೆಯಾಗಿಬಿಡುವೆ ಎಲ್ಲಿಗೆ
ಕ್ಷಣದುಸಿರೇ ಉಡುಗೊರೆಯೇ
ಕಿರುನಗೆಯ ತರಲು ಮೆಲ್ಲಗೆ
ನೀ ಕಳ್ಳನೋ ಕರುನಾಳೊ
ಅರಿಯೇ ನಾ ತಿಳಿವ ಬಗೆ
ಮರುಳಿಯಾಗಿಬಿಡುವೆ ನೀ ಸುಳಿಯೇ
ವಿದಾಯದ ಕಂಬನಿ ಮಿಡಿದು ನೋವಿಗೆ
ತನು ಮನ ಉಲ್ಲಾಸಿಸುವವನೆ
ಹೀಗೆ ಸಾಗಲಾಗದೆ ನೀ ಜೊತೆಜೊತೆಗೆ
- ಶ್ರೀಕಾವ್ಯ
26 May 2018, 10:03 pm
Download App from Playstore: