ದೇವರು

ಅಣ್ಣ ಕಂಡೀರ, ಅಜ್ಜ ಕಂಡೀರ
ನನ್ನ ಹೆಂಡೀರ
ಅಕ್ಕ ಕಂಡೀರ,ತಮ್ಮ ಕಂಡೀರ
ನನ್ನ ಹೆಂಡೀರ
ಜನಗಳ ಬಾಯಿಗೆ ಹಣ್ಣಾದವಳು
ರಸಿಕರ ಪಾಲಿಗೆ ಹೆಣ್ಣಾದವಳು                         
ಹಗಲಿರುಳು ನನ ನೆರಳ ಜೊತೆಗಿದ್ದವಳು                          
ಮನೆದೀಪ ಹಚ್ಚಿರಲು ಹೊರ ಹೋದವಳು

ಘಮಘಮ ಮಲ್ಲಿಗೆ ತಂದಿರುವೆ
ರುಚಿಸುವ ಹಣ್ಗಳ ಇಟ್ಟಿರುವೆ
ಸಂಜೆಗು ಮುನ್ನ ಮಡಿಯಾಗಿದೆ                     
ನಿದಿರೆಯು ನನ್ನ ಹೊರ ನೂಕಿದೆ                                
ತಡವಾಗಿದೆ ಹಸಿವಿದೆ ಕೇಳಿರಿ
ದಾರೀಲಿ ಸಿಕ್ಕರೆ ಮರೆಯದೆ ಕಳಿಸಿರಿ

ನೆನ್ನೆ ತನಕ ನಮಗೆ ಮುನಿಸಿಲ್ಲ                                 
ಹೆಂಡಿರ ತೊರೆಯಲು ಮನಸಿಲ್ಲ
ಸರಸಕೆ ಕರೆದರೆ ಬರುತಿಲ್ಲ
ಮೈತ್ರಿಗೆ ಸಮಯದ ಅರಿವಿಲ್ಲ
ಕದ್ದು ತಿನ್ನುವ ಆಸೆಯು ನನಗಿಲ್ಲ
ಒಪ್ಪಿ ಬಂದರೆ ದಂಡಿಸಿ ಸುಖವಿಲ್ಲ

- ಜಿ. ಪ್ರಕಾಶ್

07 Jun 2018, 04:28 pm
Download App from Playstore: