ಹಸಿರು - ಉಸಿರು

ನನ್ನೊಡಲ ಉಸಿರು‌
ನಿನ್ನಲೆ‌ ಬೆರೆತಿದೆ ಹಸಿರೆ
ಅಳಿಯದುಳಿಯಲೆನ್ನ ಹೆಸರು
ನೀನೇನೆ‌ ಮೂಲ ಆಸರೆ

ದೂರಾದರೆ ಈ ಭುವಿಯ ಮರೆತು
ಬೇರೇನಿಲ್ಲ ಅಳಿವಿನ ಹೊರತು
ಮರೆಯಾಗದಿರು ಉಳಿಸದೆ ಗುರುತು
ಬದುಕುವೆ ನಾ‌ ನಿನ್ನ ಬೆರೆತು

ನೀ ನಳನಳಿಸಿ ಹಸಿರಾಗಿ ನಕ್ಕರೆ
ನಗುವೆ ಕುಡಿದಂತೆ ಹಾಲು ಸಕ್ಕರೆ
ನೀನೇನೆ ಅತ್ತು ಅತ್ತು ಸತ್ತರೆ
ಸುಟ್ಟು ಸಾಯುವಳು ಈ ಧರೆ

ನೀನಿಲ್ಲದೆ‌ ನಾನೇನು ಅಲ್ಲ
ನಾನಿಲ್ಲದೆ ಅಳಿವುದು ಎಲ್ಲ
ನೀ ಜೊತೆಜೊತೆಯಿರೆ ನಲ್ಲ
ಕರುಳ‌ಬಳ್ಳಿಗಳ ಜೀವನ ಸವಿಬೆಲ್ಲ

- ಶ್ರೀಕಾವ್ಯ

08 Jun 2018, 06:39 pm
Download App from Playstore: