ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ
ಬದುಕು ಕಲಿಸುವ ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ
ಐಪಿಎಸ್ಸು ಐಎಸ್ಸಿನ ಕೆಲಸ್ದಲ್ಲಿ ಸರ್ಕಾರಿ ಸ್ಕೂಲವ್ರೆ ನೋಡಣ್ಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ
ಲಕ್ಷ ಲಕ್ಷ ಡೊನೆಷನ್ ಕೊಟ್ಟು ಕಲಿತವ್ನು ಅಷ್ಟೇ ಕಣಣ್ಣ..
ಕನ್ನಡ ಕಲಿತವ ಹಣದ ಕೋಟೆ ಕಟ್ಟ ಬಹುದಣ್ಣ..
ವಿದ್ಯೆ ಪಡೆದವ್ನು ದೇಶದ ಒಳಿತಿಗೆ ನಿಜವಾಗಿ ಬೇಕಣ್ಣ..
ವಿದ್ಯೆಇಲ್ಲದ ಮುಖ ಹಾಳೂರಹದ್ದು ಅನ್ನೋದು ಮರೆಯಬೇಡಣ್ಣ..
ಶಿಕ್ಷಣವೇ ಶಕ್ತಿಯಂತೆ ಅನ್ನೋದು ತಿಳಿಯಣ್ಣ..
ನಾವೆಲ್ಲರೂ ಕಲಿಯೋಣ ನಾವೆಲ್ಲರೂ ಬೆಳೆಯೋಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೊ ನಮ್ಮ ಮಕ್ಳಣ್ಣ..
ಉಚಿತ ಶಿಕ್ಷಣ ಕಡ್ಡಾಯ ಶಿಕ್ಷಣ ಮಗುವಿನ ಹಕ್ಕಣ್ಣ
ಆಟದಿಂದ ಪಾಠವನ್ನು ಕಲಿಸೋ ಗುರುವಣ್ಣ
ಸರ್ಕಾರಿಶಾಲೆ ಅನ್ನಬೇಡ ಓದಲು ಕಳಿಸಣ್ಣ..
ನಲಿಕಲಿ ಶಿಕ್ಷಣಕೆ ಮಕ್ಕಳೆಲ್ಲ ಹರುಷದಿ ಬರುವರಣ್ಣ
ಪಾಠ ಮಾಡುವಾಗ ಚಟುವಟಿಕೆ ಇರುವುದಣ್ಣ
ಇಲ್ಲಿ ಯೋಜನೆ ನೂರಾರು ಈ ಮಕ್ಕಳ ಬೆಳಗಿಸಲು..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ..
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ..
- ಸುರೇಶ್ ಟಿ ವಿ
09 Jun 2018, 08:24 pm
Download App from Playstore: