ಕೂಡಿಟ್ಟದನ್ನೆಲ್ಲ ಹೊರುವವರ್ಯಾರು..?

ಕೂಡಿಟ್ಟದೇಲ್ಲ ಪರರಿಗೆಂದು ಹೇಳುವರು
ಜ್ಞಾನಿಗಳು..... ಸಾಧಕರು
ಅದ ಕೇಳಿ ಬದಲಾದವರುಂಟೆ ತಿಳಿದರು
ಕುಡಿಡುವುದ..... ನಿಲ್ಲಿಸಿದವರುಂಟೆ

ಏಕೆ ಈ ಜ್ಞಾನಬಂಡಾರಗಳ ತಿಳಿವಂತಿಕೆ
ಈ ಯುಗದ ಜನಕೆ......

ಸತ್ಯದದಾರಿ ಬಲುಕಠಿಣವಂತೆ ಅದಕ್ಕೆ
ಇಲ್ಲಿ ಸತ್ಯದದಾರಿ ತುಳಿಯುವುದಿಲ್ಲವೇನೋ
ಸುಳ್ಳಿನದಾರಿ ಬಲು ಸುಲಭವಂತೆ.....
ಅದಕ್ಕೆ ಇರಬೇಕು ಇಲ್ಲಿ ಸುಳ್ಳೇ ಸರ್ವಾಧಿಕಾರಿ

ಪರಮಾತ್ಮ ನೋಡುತಿಹನು ನಿನ್ನ ಕರ್ಮಗಳ
ಏನ ನೋಡುವನು ಅನ್ಯಾಯಗಳ
ಬಡವರ ಕಷ್ಟಗಳಸುಮ್ಮನೆ ತಟಸ್ಥನಾಗಿ ನಿಂತು
ನೋವುಂಡವರ ಕೂಗಿಗೆ ಕಿವಿಗೊಡದೆ

ಅನುಭವಿಸಬೇಕು ಪಾಪಗಳ ಫಲವ
ಆದರೆ.. ಯಾರೋ ಮಾಡಿದ ಪಾಪವ
ಯಾರೋ ಅನುಭವಿಸುತಿಹರು...... ಇಲ್ಲಿ
ಪುಣ್ಯದ.... ಫಲದ ಕನಸು ಕಾಣುತ್ತಾ

ಯಾರ ದೂರಿದರೆನಂತೆ ನಿನ್ನ ನಿ ನೋಡಿಕೊ
ಇಂದಿಗಾದರು ಬಿಡು ನಿನ್ನ ಆಸೆಕೊತ್ತಲಗಳ
ಈ ಕೋಟೆ ಗದ್ದಲಗಳ ... ಅರಮನೆಯ
ಯಾವುದು ಇಲ್ಲಿ ನಿಜವಲ್ಲ........


.......... ಮಂಜು

- ಮಂಜು

11 Jun 2018, 06:39 pm
Download App from Playstore: