ಪ್ರೀತಿ ಮಡಿಲು

ಈ ನನ್ನ ಪ್ರೀತಿ ...

ಅಳೆಯಲಾಗದ ಕಡಲಿನ ನೀರಿನಂತೆ....
ಒಮ್ಮೊಮ್ಮೆ ನಿನಗೆ ಉಪ್ಪುಪ್ಪೆನಿಸಿದರು
ನಿಷ್ಕಲ್ಮಶವಾದ ಖನಿಜ ತುಂಬಿದ ಸಾರ...

ಈ ನನ್ನ ಪ್ರೀತಿ ...

ಕಷ್ಟಗಳೆಂಬ ಎಷ್ಟು ಮೊಡಗಳಿದ್ದರು
ಮುಗಿಲಲಿ ಕಾಣುವ ತಿಳಿನೀಲಿ ಬಣ್ಣದಂತೆ..
ಮೊಡವೆಷ್ಟೆ ಇದ್ದರೂ ಬಣ್ಣವೆಂದೂ ಮಾಸದು..

ಈ ನನ್ನ ಪ್ರೀತಿ ...

ಮುರಳಿಯ ಕೊಳಲಲಿ ಮೂಡುವ
ನಾದಲಹರಿಯ ಸಂಗೀತದಂತೆ..
ಸಂಗೀತಕೆಂದೂ ಕೊನೆಯೇ ಇರದು..

ಈ ನನ್ನ ಪ್ರೀತಿ ...

ಮಗುವಿನ ನಗುವಿನ ಇಂಪಂತೆ..
ಮಗುವಿನ ನಗುವಿನ ಇಂಪು
ಮನಕೆ ಎಂದೆಂದೂ ತಂಪು...

ಈ ನನ್ನ ಪ್ರೀತಿ ...

ಕೊನೆಯೇ ಸಿಗದ ದಾರಿಯಂತೆ..
ನಾನೆಲ್ಲೇ ಓಡಿದರು, ಮತ್ತೆ ಬಂದು ಬೀಳುವೆ
ನಿನ್ನ ಮಡಿಲಲ್ಲೆ...

- ಮಂಜುನಾಥ್. ಸಿ
ಚಾಮರಾಜನಗರ..

- Manju..

15 Jun 2018, 12:51 am
Download App from Playstore: