ಎಲ್ಲ ನಶ್ವರ ಮಾನವ.....
ನಾನು ನನ್ನದು ಎನ್ನುವುದು
ಕ್ಷಣಕಾಲದ ಮಾತುಗಳಷ್ಟೇ
ಇಂದು ನೀ ಒಡೆಯ ನಾಳೆ
ಇನ್ನಾರೋ ಯಾರು ಬಲ್ಲವರು
ನಾನು ನನ್ನಿಂದಲೇ ಎಂದವನ ಸ್ಮಶಾನಕ್ಕೆ
ಭೇಟಿಕೊಂಡೆಂದ ಪರಮಾತ್ಮ
ಯಾರು ನೀಡಿದರು ಹುಟ್ಟು ಮಾತ್ರ ನಿನಗೆ ಗೊತ್ತು
ಮರಣ ಬಗ್ಗೆ ಪರಿಚಯ ಕೂಡ ನಿನಗಿಲ್ಲ
ಬರುವಾಗ ನೀ ಅಳುತ್ತಲೇ ಬರುವೆ
ಹೋಗುವಾಗ ಅಲವರನ್ನು ಅಳಿಸುವೆ
ಅವರು ನನ್ನವರು ಇವರು ನನ್ನವರೆನ್ನುವೆಯಲ್ಲ
ಹೊರಡುವಾಗ ಜೊತೆಗೆ ಬರುವವರ್ಯಾರು
ಎಲ್ಲವೂ ನನ್ನಿಂದಲೇ ಎನ್ನುವ ಅಗತ್ಯವಿಲ್ಲ
ಅದಕ್ಕೆ ಕಾರಣಕರ್ತರು ಇದ್ದೇ ಇರುತ್ತಾರೆ
ನೀ ಬರುವ ದಿನಾಂಕ ನೀ ತಿಳಿದಿರುವೆ
ನಿನ್ನ ಜೀವನದ ಕೊನೆಯ ದಿನಾಂಕ ನಿ ಬಲ್ಲೆಯ
ಅಂಹಕಾರ ಜಂಭದಿಂದ ಬೀಗಬೇಡ
ಇಂತವರು ಮಣ್ಣಲ್ಲಿ ಮಣ್ಣಾದ ಚರಿತ್ರೆ ಅಲವು
ಬರುವಾಗ ಹೊತ್ತುತಂದದ್ದು ಏನು ಇಲ್ಲಾ ಎಂದ ಮೇಲೆ ಹೋಗುವಾಗ ಕೊಂಡೊಯ್ಯಲು ಏನಿದೇ
ಯಾರಿಗಾಗಿ ಯಾವುದಕ್ಕಾಗಿ ಹೊಡೆದಾಟ
ಬಡಿದಾಟ ನೀನೇ ಶಾಶ್ವತವಲ್ಲವೆಂದಮೇಲೆ
ಷಡ್ಯಂತ್ರಗಳ ರೂಪಿಸಿ ದುರ್ಯೋಧನ ಗೆದ್ದದ್ದೇನು
ಅಧರ್ಮದ ರೂವಾರಿ ರಾವಣ ಸಾದಿಸಿದ್ದೇನು
ಮಾನವ ಧರ್ಮಕ್ಕೆ ತಲೆ ತಗ್ಗಿಸಿ ನಿ ಬಾಳು
ಇರುವ ವರೆಗೆ ದುಡಿದು ನಿನ್ನೆ ಹೆಸರ
ಭೂಮಿಯಲ್ಲಿ ಬಿತ್ತಿ ಹೋಗು ಕರ್ಣ ನಂತೆ
ಮಂಜು
- ಮಂಜು
19 Jun 2018, 08:36 pm
Download App from Playstore: