ಗಂಡು ಹೆಣ್ಣಿನ ತಾರತಮ್ಯ
ಧ್ವನಿ ಎತ್ತಿ ಮಾತನಾಡದ ಮೌನ ಎಂದಿಗೂ
ಎಲ್ಲಾ ಗೊಂದಲಗಳಿಂದ ಹೊರಬರುವುದು
ಬೇರೊಂದು ಊರಲ್ಲಿ ಊಹೆಗಟ್ಟಿ
ಬದುಕಿತಿರುವ ಜನರು
ಹೆಚ್ಚಂತೆ ಗಂಡು ಹಾಳಂತೆ ಹೆಣ್ಣು!!
ಊರ ಸುತ್ತುವ ಅಲೆಮಾರಿಗೆ ವರಮಾನವಿತ್ತರಂತೆ
ಸೂರ್ಯ ಕಣ್ತೆರೆವ ಮುನ್ನ ಎದ್ದ ಹೆಣ್ಣಿಗೆ ನಡುಹೊತ್ತು ಜಾರಿದರೂನು
ಕೆಲಸ ಕಾರ್ಯಗಳು ನಿಲುಕಿಲ್ಲದೆ
ನೀಡಿದರೂ ಆಜನ್ಮ ಕರ್ಮವೆಂದು
ದುಡಿದು ಹಾಕಲಿವರಿಗೆ!!
ತಾರತಮ್ಯದ ತುಲಾಭಾರವೇತಕೆ
ಉಸಿರಾಡುವ ಉಸಿರಾಗುವ ಗಾಳಿಗೆ
ಭೇದವಿಲ್ಲದ ಮೇಲೆ!!
ಸಾವ ನೋವನೊತ್ತು ಜನ್ಮವಿತ್ತವಳ
ಉದರದಲ್ಲೇ ಸಮಾನತ್ವ ಇಲ್ಲದಾಯಿತು
ಎಷ್ಟೇ ಕಾಲ ಮುಂದುವರೆದರೂನು
ನಾನಿಂದು ಬರೆಯುವ
ಕವನದ ಪದಗಳಲ್ಲೂ ಸಹ!!
- ಚುಕ್ಕಿ
22 Jun 2018, 08:01 pm
Download App from Playstore: