ಒಲವಹೆಜ್ಜೆ
ಬಾನರವಿ ಪಡುವಣದಿ ದಣಿದು ನಿಂತಿರಲು
ತಂಗಾಳಿ ಮುಂಗುರಳ ಸವರಿ ನಗುತಿರಲು
ಕೈ ಹಿಡಿದು ಕಡಲ ತೀರದಿ ಹಾಕಿದೆವು ಹೆಜ್ಜೆ
ಪಾದ ಸೋಕಿ ಅಡಗುವ ಅಲೆಗೂ ಕೊಂಚ ಲಜ್ಜೆ
ಹಿಡಿದ ಕರಗಳಿಗೆ ನಾವು ಒಂದೆನ್ನುವ ಭರವಸೆ
ನೋಟದಲಿಲ್ಲ ತನುವ ಕೆರಳಿಸುವ ಆಸೆ
ಮನದ ಕಣಕಣದಿ ಮಧುರ ಭಾವ
ಅರಿತ ಜೀವ ಕಾಣದೆಂದು ವಿರಹದ ನೋವ
ಬಂಧ ಬೆಸೆವ ನಂಟಿಗೆ ಸಾಕ್ಷಿ ಅಗ್ನಿಯ ಒಡಲು
ನಾನೇ ಎಂಬ ಅಹಂನ ಆಹುತಿ ನೀಡಲು
ಸಿಕ್ಕಿದೆ ಪ್ರೀತಿ ಮನಕೆ ಮಣಿವ ಒಲವು
ದಿಟ್ಟ ನಿಲುವಿಗೆ ದಕ್ಕಿದೆ ಗತ್ತಿನ ಗೆಲುವು
ಮೆಲ್ಲನುಲಿವ ಬೆಳ್ಳಿ ನೂಪುರ
ಬೆವರಲಿ ಮಿಂದು ಕರಗಿದ ಸಿಂಧೂರ
ಹಸಿರು ಗಾಜಿನಬಳೆಗಳು ನಕ್ಕವಂದು
ಮಧುರ ಮಿಲನಕೆ ಸಾಕ್ಷಿ ನಾವಾದೆವೆಂದು
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
23 Jun 2018, 05:07 pm
Download App from Playstore: