ನೀನು..
ನನ್ನೆಲ್ಲಾ ನೋವುಗಳನು ಕ್ಷಣದಲ್ಲೇ ಮರೆಮಾಚುವ ನಗುವು ನೀನು, ಮನಸು ಕಂಡ ಮನಮೋಹಕ ಮಾಯೆ ನೀನು, ನೆನ್ನೆಯಲ್ಲಿ ಅಡಗಿದ್ದ ನನ್ನ ನೆರಳಿನ ಛಾಯೆ ನೀನು, ನಾಳಿನೆಡೆಗೆ ನನ್ನ ನಡಿಸುವ ಆಸೆ ನೀನು.
ಒಲವುಣಿಸಿದ ಅಮೃತಕೆ ಸಿಹಿ ತುಂಬಿದ ಪ್ರೀತಿ ನೀನು, ನನ್ನೆದೆಯ ಪುಟ್ಟ ಗುಡಿಸಿಲಲ್ಲಿ ಹೃದಯ ಹಚ್ಚಿದ ನಂದಾದೀಪ ನೀನು.
ಏನೆಂದು ಹೇಳಲಿ ನಾನಿಂದು ನಿನಗೀಗ ಸವಿಯಾದ ಈ ಬಾಂಧವ್ಯಕೆ ಹೊಸತಾದ ಜಗವ ಹುಡುಕುವ ಆಸೆ ನಿನ್ನೊಡನೆ ನಗುತಿರಲಿ ಯಾವ ಅಡ್ಡಿ ಆಮಿಷೆಗಲಿಲ್ಲದೆ.
ಕೊರಡು ಕೊನರಿ ತಡವರಿಸಿ ತಂದ ನಿನ್ನ ವಿಳಾಸ ಸರಸರನೆ ಡಬಡಬಿಸುವ ಹೃದಯಕ್ಕೆ ಕೊಟ್ಟು ಭಾರ ತೀರಿಸಿಕೊಳ್ಳುವ ಆಸೆ ಸದ್ದು ನಿಲ್ಲಿಸೆಂದು ನಿನ್ನ ಇನಿಯನ ಮನವ ಸೇರಿ.
ಕಣ್ಣ ಹನಿಯಲ್ಲಿ ಭಾಗಿಯಾದ ನಿನ್ನ ಕಂಬನಿಗೆ ಹಂಚಿಕೊಡುವ ಆಸೆ ನನ್ನ ಹೃದಯವ ನೆಲೆಯಾಗಿ ನನ್ನೊಡನೆ ಬಾಳೆಂದು ಒಂದೇ ಉಸಿರಾಗಿ ಗೆಳೆಯ.
- ಚುಕ್ಕಿ
23 Jun 2018, 05:07 pm
Download App from Playstore: