ನಾ ನನ್ನ ಅಗಲಿದಲ್ಲಿ..

ನನ್ನವರಲ್ಲದವರೆಲ್ಲ ಕರುಣೆ ತೋರಿ
ಕಣ್ಣೀರಾಕುವರು ನನ್ನ ಪಾರ್ಥಿವ ದೇಹ ನೋಡಿ,
ಗುಣಗಾನವ ಮಾಡಲಾರಂಭಿಸುವರು ನಾ ಮಾಡದಿರುವ ಮಾಡಿರುವ ಸರಿ ತಪ್ಪುಗಳ ಎಣಿಸಿ ಜವರಾಯನಿಗೆ ಲೆಕ್ಕ ಕೊಡಲೆಂದು ಶರೀರ ಸುಡುವ ಮುನ್ನ ಅಳುವ ನೆವದಲ್ಲಿ!!

ನನ್ನ ನಾ ಅಗಲಿದಲ್ಲಿ ನೆಂಟಸ್ತಿಕೆಯ ನಂಟು ಹಾಕಿ ಕೂಡಿಟ್ಟ ಗಂಟು ದೋಚಲು ಹಾಜರಾಗುವರು ನನ್ನ ಧನ, ಮಾನ ಮರ್ಯಾದೆಗಳನ್ನು ಹರಾಜಾಕಳು!!

ಉಸಿರಾಡುವ ಉಸಿರಿಗೆ ತುತ್ತು ಅನ್ನ ಹಾಕಲಾಗದವರು ಹೆತ್ತ ತಂದೆ-ತಾಯಿ ಅಣ್ಣ- ತಂಗಿ ,ತಮ್ಮ ಎಂದು ಬಾಂಧವ್ಯ ಬೆಳೆಸಿಕೊಳ್ಳುವರು ಮಣ್ಣ ಅಡಿ ಅಲುಗಾಡದೆ ನಾ ಮಲಗಿರಲು ಕಾಲ ತೊಳೆದು ಹಾಲು ಹಾಕಿ ನನ್ನ ನೆತ್ತಿಗೆ!!

ನನ್ನ ಕಟ್ಟಿಕೊಂಡ ಪಾಪದವಳು ಹೆಂಡತಿಯೊಬ್ಬಳ ಗೋಳೋಯ್ಯುಕೊಳ್ಳುವರು ಹಣೆಯ ಸಿಂಧೂರ ಅಳಿಸಿ ಬಳೆಯ ಹೊಡೆದು ರಕ್ತ ಸುರಿಸಿ,
ಕಾಲುಂಗುರ ಕಿತ್ತೆಸೆದು ಮಾಂಗಲ್ಯವ ಮಾರಿ ತಿಂದು!!

ಬಂದೂಕುಗಲಿಲ್ಲದ ಉಗ್ರರಿವರು,
ಹೆಸರುವಾಸಿ ಆಗದ ದರೋಡೆಕೋರರು
ಇವರು ಎತ್ತ ನೋಡಲಿ ಈ ಸತ್ತ ಜನರ
ಕುಖ್ಯಾತ ನಟನೆಯ,
ಹೇಗೆ ಸಾರಲಿ ಪದಗಲಿಲ್ಲದ ಪ್ರತಿಭೆಯ!!

ನೀಲ ಕೇಶ ರಾಶಿಯ ತಗೆಸಿ, ಈಚಲು ಚಾಪೆ ನೆಲಕ್ಕೆ ಹಾಸಿ ಮೂರು ತುಂಡಾದ ಕಂಬಳಿ ಹೊದಿಸಿ ನೂಕದಿರಿ ನನ್ನವಳ
ರಂಗು ಮಾಸಿದ ಸೀರೆಯುಡಿಸಿ ಇರಲಿ ಜೀವಂತ ನನ್ನ ನಗು ಅವಳಲ್ಲಿ ,ಹಣೆಯ ಸಿಂಧೂರ ಜರುಗದೆ ಹಣೆಯಲ್ಲಿ ಘಮಗುಡುವ ಮಲ್ಲಿಗೆ ಅವಳ ಶಿಗೆಯಲ್ಲಿ......

ನಾನಿರುವೆ ನನ್ನವಳ ಪ್ರತಿಯೊಂದು ಉಸಿರಲ್ಲಿ!!

- ಚುಕ್ಕಿ

27 Jun 2018, 06:04 am
Download App from Playstore: