ಸಡಗರ ಸಂಭ್ರಮ
ಸಡಗರ -ಸಂಭ್ರಮ
ತುಂಬಿದೆ ಮನೆಯ ಅಂಗಳ
ಮಕ್ಕಳಿಗೆ ಕುಣಿದು ಕುಪ್ಪಳಿಸುವಾಸೆ
ವಯಸ್ಕರಿಗೆ ಕಬಳಿಸುವಾಸೆ
ಒಡೆಯರಿಗೆ ನಿಭಾಯಿಸುವ ತವಕ
ಮಹಿಳೆಯರಿಗೋ ಶುಚುಗೊಳಿಸಿ
ಅತಿಥೇಯರ ಉಪಚರಿಸುವ ತವಕ
ಅರಿಷಿಣ- ಕುಂಕುಮ ,ಹಸಿರು
ತೋರಣದಿಂದ ಸಿಂಗಾರಗೊಂಡಿದೆ
ಮನೆಯ ಮಹಾದ್ವಾರ
ಹಣತೆಯ ಹೊಂಬೆಳಕಲಿ ,ಘಮಿಸುವ
ಹೂ ಮಾಲೆಯಿಂದ ಬೆಳಗುತಿದೆ
ದೇವರ ಮನೆಯ ಅಂಗಳ
ಊರ ಮಾರಿಯರಿಗೆ
ದೀಪೋತ್ಸವದ ಸಂಭ್ರಮ
ಕುರಿ,ಕೋಳಿ,ಮೇಕೆಗೆ
ಕಾಯುತಿದೆ ಮಸಾಲೆಯ ಘಮ
ಮೂಕ ಪ್ರಾಣಿಗಳ ಅಂತಿಮ ಯಾತ್ರೆ
ನರರಿಗೆ ಉತ್ಸವದ ಜಾತ್ರೆ
ಕಾಲನು ಬಂದು ಸೆಳೆದಾಗ ನರನ
ಗೋಳಿಡುವರು ಈ ಜನ
ಕಾಲನು ಹಿಡಿದು ಕತ್ತರಿಸುವಾಗ
ಅರಸುವುದು ಒಡತಿಯ ತಾನಾಗ
ಮೂಕವೇದನೆಯ ಮುಗಿಸುವುದು
ಮೌನದಲಿ ಪರರತೃಪ್ತಿಗಾಗಿ
- ಶಕುಂತಲಾ
28 Jun 2018, 09:13 am
Download App from Playstore: