ಮೌನದ ಮಳೆ........

ಸಂಜೆಯೊಳಗೊಂದು ಮೌನದ
ಮಳೆಯೊಂದು ಸದ್ದು ಮಾಡದೆ
ಸುರಿಯುತಿದೆ..........
ಭೂದೇವಿಯ ಮಡಿಲ ತುಂಬಿ
ಹಸಿರು ಸಿರಿಯ ತುಂಬಿ
ಹರಿಸೋಕೆ...........
ಬಾನಂಗಳವೆ ತುಂಬಿ ಬೆಳಕನ್ನ
ಚೆಲ್ಲುತ್ತಾ ಈಡಿ ಜಗದ ಒಡೆಯೆನೆ
ನಾನೆಂದು ಬೆಳಗುತಿದ್ದ ಆ ಸುರ್ಯ ನ
ಮರೆ ಮಾಡಿ ನನಗಾರು ಸಾಟಿ ಎಂದು
ಬಾನೆಲ್ಲ ತುಂಬಿ ಸುರಿಯುತಿಹುದು
ಸಂಜೆಯೊಳಗೊಂದೂ
ಮೌನದ ಮಳೆ...........
ಮನಸುಗಳ ಮೌನ
ಮರೆಮಾಡುವಂತೆ ಸುರಿಯುತಿದೆ
ಎಲ್ಲರಮನೆ ಮನದಂಗಳದಲ್ಲಿ
ಸಂಜೆಯ ಮಸುಕು ಮಳೆ..........
ಮೌನದ ಮಳೆ..........

- ರಾಗಸಿರಿ....

11 Jul 2018, 04:20 pm
Download App from Playstore: