ದರ್ಪಣ ಸುಂದರಿ

ಈ ಸೃಷ್ಠಿಯೊಂದು ಸುಂದರ ಕನ್ನಡಿ...
ಬರೆಯಲಾರೆ ನಾ ಅದರ ಮುನ್ನುಡಿ...
ಬಿಂಬಿಸುತಲೇ ನಿಂತಿದೆ ಈ ಸುಂದರಿ...
ಹೇಳುತ್ತಿದೆ ನೀ ಅಂಟಬೇಡ ಜಡಿ ಜಡಿ...

ಶ್ಲಾಘನೆಗಳ ಜೊತೆಗಿಲ್ಲ...
ಕುರೂಪತೆಗೆ ಆಂಟೋಲ್ಲ...
ಬಿಂಬಿಸುತ ಎಲ್ಲವನು ತಾನು...
ತೋರಿಹಳು ಎಲ್ಲರ ಚಲುವನ್ನು....

ಕೋಪದಲಿ ಕುಪಿತಳಾಗಿ...
ಭಾವದಲಿ ಭಾವುಕಳಾಗಿ...
ಯಾವ ಸ್ಥಿತಿಯು ನಾನಲ್ಲವೆಂದು...
ನೋಡುವಳು ನೀ ಯಾಕೆ ಹೀಗೆಂದು...

ಒಮ್ಮೆ ದರ್ಪಣದ ಈ ಚಲುವೆ...
ಕಂಡಳೋ ನನ್ನ ತನುವೊಳಗೆ...
ಕಾಣದು ದರ್ಪ ಅವಳೊಳಗೆ...
ಬಿಂಬಿಸುವ ಸ್ಥಿತಿಯಾದೆನು ಅವಳೊಳಗೆ...

---ಮುಕೇಶ್ ದಾತಾರ್ . ರ

- ಮುಕೇಶ್ದಾತಾರ್.ರ

12 Jul 2018, 10:03 am
Download App from Playstore: