ವೈದ್ಯ

ಅವರವರ ನೋವಿಗೆ
ಅವರವರ ನಲಿವಿಗೆ
ಅವರವರ ಸುಖ ದುಃಖಕ್ಕೆ
ಸ್ಪಂದಿಸುವನು ವೈದ್ಯ !

ಅವರವರ ಪ್ರೀತಿಗೆ
ಅವರವರ ವಿರಹಕ್ಕೆ
ಅವರವರಲೊಂದಾಗಿ
ಸಂತೈಸುವನು ವೈದ್ಯ!

ಅವರವರ ರೊಚ್ಚಿಗೆ
ಅವರವರ ಕಿಚ್ಚಿಗೆ
ಅವರವರ ರಾಗ ದ್ವೇಷಗಳಿಗೆ
ಹೊರತಾಗಿರುವನು ವೈದ್ಯ!

ಅವರವರ ಚಿಂತನಕೆ
ಅವರವರ ಮಂಥನಕೆ
ಅವರವರ ಯೋಚನಾಲಹರಿಗೆ
ನಿಲುಕುವನು ವೈದ್ಯ!

ಅವರವರ ಭಾವಕ್ಕೆ
ಅವರವರ ಭಕುತಿಗೆ
ಅವರವರ ತೆರನಾಗಿ
ಇರುತಿಹನು ವೈದ್ಯ!

ಡಾ!ಸಿ.ಮುರಳೀಧರ
ಜುಲೈ,2018

- ಡಾ!ಸಿ.ಮುರಳೀಧರ

12 Jul 2018, 11:47 am
Download App from Playstore: