ಬೀಳ್ಕೊಡುಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಈ ಕವನವೇ ನಿನಗೆ ನಾ ಕೊಡುವ ಬೀಳ್ಕೊಡುಗೆ...
ಬಿಡುವಿನ ಸಮಯದಿ ನೀನೋಡು ನನ್ನೆಡೆಗೆ...
ನಿನ್ನಲ್ಲೇ ಹಬ್ಬಿರುವೆ ನೀ ಇಳಿಯೆ ನಿನ್ನನ್ನೊಳಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮತ್ತೊಮ್ಮೆ ಬರುವಾಗ ನೀ ತಿಳಿಸು ನನಗೆ...
ಒಂದಾಗಿ ಹೋಗುವ ಆ ಮರದ ಕಡೆಗೆ...
ಕ್ಷಣಗಳ ಮಿಂಚಲ್ಲಿ ಒಂದಾಗುವ ಘಳಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ವಿರಹವೇ ತಾಕದು ಈ ನಮ್ಮ ಪ್ರೀತಿಗೆ...
ಭಾವನೆಯ ಜೊತೆಗೂಡಿ ಇರುವೆ ನಾ ನಿನ್ನೊಳಗೆ...
ಮೌನದಲಿ ಆಲಿಸು ನಾ ನಡೆವ ನೆಡುಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ನಿನ್ನೊಳಗೆ ನೀ ಕೊಟ್ಟೆ ನನಗೊಂದು ಜಾಗ...
ಅಲ್ಲಿಂದಲೇ ನೋಡುವೆ ಈ ಪ್ರೀತಿ ಜಗವ...
ನೀನಿತ್ತ ಆಸರೆಗೆ ಬರೆದಿರುವೆ ಈ ಪ್ರೀತಿ ಪದವ ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮೌನದಲಿ ನಾ ನಿಂತು ನಿನ್ನ ನೋಡಿ ನೋಡಿ...
ನಿನ್ನೆಲ್ಲ ಆಟದಲ್ಲಿ ನಿನ್ನೊಳಗೆ ಜೊತೆಗೂಡಿ...
ಹಾಡಾಗಿ ಹಾಡುತಿಹೆ ಅಂತರಾಳದ ದನಿಗೂಡಿ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
---ಮುಕೇಶ್ ದಾತಾರ್ . ರ ---
- ಮುಕೇಶ್ದಾತಾರ್.ರ
12 Jul 2018, 04:37 pm
Download App from Playstore: