ಕಣ್ಣ-ಹನಿಗಳು
*ಹನಿಗವನಗಳು*
*೧.ಬೆಂಕಿ ಹಚ್ಚಿ*
ನಾವು ಕಂಡ ಕನಸಿನ ಸೌಧಕೆ ಬೆಂಕಿ ಹಚ್ಚಿ ಹೋದೆ
ಅದರೊಳಗೆ ನಾ ಸಾಯುವುದ ಕಾಣದೆ
ನೀನೂ ಬೆಂದು ಹೋಗುವೆಯೆಂದು ತಿಳಿಯದೆ
-----------------------------------------------------------------
*೨.ಕಾಲ್ಗೆಜ್ಜೆ*
ಸದ್ದು ಮಾಡದಿರೇ ಕಾಲಗೆಜ್ಜೆಯೇ
ನಿದ್ರಿಸಿದ ಅವನ ನೆನಪುಗಳು ಎದ್ದೀತು
ಅವನ ನೆನೆದು ಮನ ಸತ್ತೀತು
-----------------------------------------------------------------
*೩.ಅವನ ನೆನಪು*
ಮಿಂಚಿ ಮರೆಯಾಗುವ ಅವನ ನೆನಪುಗಳಿಗೆ
ನನ್ನೆದೆಯೇ ಕಗ್ಗತ್ತಲ ಗಗನ
ಆಗಾಗ ಕೇಳಿಸದ ಚೀತ್ಕಾರದ ಸಿಡಿಲು ಗುಡುಗಿನ ತನನ
- ಶ್ರೀಕಾವ್ಯ
13 Jul 2018, 06:38 pm
Download App from Playstore: