ತವರು ಮನೆ ತೋಟದಲಿ

ತವರು ಮನೆ ತೋಟದಲಿ
ಕೆಂಡ ಸಂಪಿಗೆಯ ಹೂ ಅರಳಿ!!
ಮುಡಿದವರ ಮುಡಿ ಸೇರಿ
ಸಾಗಿಹುದು ಬಲು ದೂರ!!

ಮುಡಿದವರ ಮುಖದಲ್ಲಿ
ಮಂದಹಾಸವು ಅರಳಿ!!
ಘಮಿಸುತಲೇ ಬಾಡಿಹುದು
ಸಂಪಿಗೆಯು ತಾ ನರಳಿ!!

ಬಾಡಿರುವ ಹೂವಿಗಿದೋ
ಮೊದಲಿನ ಬೆಲೆಯೆಲ್ಲಿ!!
ಮುಡಿದವರು ಎಸೆದಿಹರು
ಯಾವುದೋ ಮೂಲೆಯಲಿ!!

ಮೂಲೆಯಲಿ ಬಿದ್ದಿರುವ
ಹೂವನು ಕನಿಕರಿಸುವರಾರು!!
ಮರಳಿ ಕೊಂಡೊಯ್ಯುವರೇ
ಬಂದು ಹೂವ ತವರಿನವರು!!

- ಪಿ.ಜಿ.ಜ್ಯೋತಿ

17 Jul 2018, 05:34 pm
Download App from Playstore: