ಹೊಸ ಆಸೆ

ಕನಸುಗಳಿಗೆ ಇಲ್ಲ ಇಲ್ಲಿ ಬೇಲಿ
ಆಕಾಶಕ್ಕೆ ಯಾರು ಬಳಿದರೋ ನೀಲಿ
ಅಂಬಾರದಾಗೆ ಬನಾಡಿಗಳು ತೇಲಿ
ಹಾಡುತ್ತಿವೆ ಬುವಿಗೆ ಸುವ್ವಾಲಾಲಿ..

ಚಿಂತ್ಯಾಕೆ ಮಾಡುತಿಯ ತಮ್ಮಾ
ನಿನ್ನಷ್ಟಕ್ಕೆ ಮಾಡುತಿರು ನಿನ್ನ ಕಮ್ಮ
ಮನದೊಳಗೆ ಇಣುಕದಿರಲಿ ಕೆಟ್ಟ ಗುಮ್ಮ
ಕೈಕಟ್ಟಿ ಕೂರದಿರು ಎಂದೆಂದೂ ನೀ ಬಿಮ್ಮ.

ಹಗಲಿರುಳು ನಿಲ್ಲದೆ ಸುತ್ತೋ ಭೂಮಿ
ಕಡಲೊಳಗೆ ಹುದುಗಿರುವ ಚಿಪ್ಪೊಂದು ಚಿಮ್ಮಿ
ನೆಗೆದೀತು ಬಾನೆಡೆಗೆ ಮಿನುಗುತಲಿ ಮುತ್ತು
ಮೈ ಕೊಡವೀತು ತಾರುಣ್ಯ ಹೊಸ ಆಸೆ ಹೊತ್ತು.

- ಶ್ರೀಗೋ.

19 Jul 2018, 10:05 pm
Download App from Playstore: