ಗುಂಡಿ ತೆಗೆದ ಅಂಗಿ..
ಗುಂಡಿ ತೆಗೆದ ಅಂಗಿ ತೊಟ್ಟರೆ ಧೀರನಲ್ಲ
ದಮ್ಮು ಎಳೆದು ಗಾಳಿ ಬಿಟ್ಟರೆ ವೀರನಲ್ಲ
ಹಿಂದೆ ಹುಡುಗಿ ಕೂತ ಗಾಡಿ ಒಡೆದರೆ ಶೂರನಲ್ಲ
ಈ ಎಲ್ಲ ಮಾಡಿದ ಮಲ್ಲರ ಮಲ್ಲ ಈಗ ಹಿಂದೆ ಉಳಿದನಲ್ಲ..
ಮಾತೆಗೆ ಮಮತೆಯ ಮಗನಾಗಿ,
ತರುಣೆಗೆ ಸಲಹೆಯ ಸ್ನೇಹಿತನಾಗಿ,
ತಂದೆಗೆ ಬೆವರಿನ ಬೆಂಬಲವಾಗಿ,
ಸೋದರಿಗೆ ಅರಿವಲಿ ಸಲಹುವ ಅಣ್ಣನಾಗಿ,
ಸತಿಗೆ ಸಂತೈಸುವ ಪತಿಯಾಗಿ,
ಜಗಕೆ ಮಣ್ಣಿನ ಮಗನಾಗಿ,
ಹರಿಸು ನಿನ್ನಯ ಋಣವ..
ಈ ಎಲ್ಲರ ಒಳಿತಿಗೆ ಭರಿಸು ಎದೆಯಲಿ ಛಲವ
ಏ ನಲ್ಲ ಆಗು ನೀ ಈ ಎಲ್ಲ ಬಲ್ಲ ಜಗದೇಕ ಮಲ್ಲ
- Manju..
20 Jul 2018, 12:09 pm
Download App from Playstore: