ಒಲವೋ..? ಗೆಲುವೋ..?

ನೆನಪಿನ ಪುಟಗಳಲಿ ಸಹಿಹಾಕಿ ಹೋಗುತಿರುವೆ..
ಮನಸನು ಮುರಿದು ಪಯಣ ಮುಂದುವರೆಸಿರುವೆ..
ಬಾನಂಚಿನ ನಿಷ್ಕಲ್ಮಶ ಪ್ರೀತಿಯ ನೀನಿಂದು ತಿರಸ್ಕರಿಸಿರುವೆ..
ಭಾವನೆಗಳ ಮರೆತು ಸಾಧನೆಯ ಕಡೆಗೆ ನಾ ಚಲಿಸಿರುವೆ..
ಕಾಡುತಿರುವ ನೆನಪುಗಳಲೇ ಮಾಡುತಿರುವೆ ಉಸಿರಾಟ..
ಕಗ್ಗತ್ತಲಲಿ ಸಾಗುತಿದೆ ಪ್ರೀತಿಯ ಹುಡುಕಾಟ..

ನಿನ್ನನು ತೊರೆದು ಇಂದು ನಾ ಮಲಗಿರುವೆ ತಾಯಿಯ ಮಡಿಲಲಿ..
ನಿರ್ಧರಿಸಿರುವೆನಿಂದು ಗೆದ್ದೇ ಗೆಲ್ಲುವೆ, ಜೀವನವೆಂಬ ಕಡಲಲಿ..
ಸ್ಫೂರ್ತಿಯ ಚಿಲುಮೆ ಉಕ್ಕಿದೆ.. ಗುರಿ ಕೈಬೀಸಿ ಕರೆಯುತಿದೆ..
ಯಶಸ್ಸಿನ ದಾರಿ ಸಿಕ್ಕಿದೆ.. ಕನಸು ನನಸಾಗುತಿದೆ..
ಹೃದಯದಲಿ ಬೆಸೆದಿರುವ ನಿನ್ನ ನೆನಪು ಕಾಡುತಿದೆ..
ನೀನಿರದೇ.. ಈ ಗೆಲುವೆಲ್ಲಾ ವ್ಯರ್ಥವೆನಿಸಿದೆ..

ವಿಭಿನ್ನ ಆರಂಭ.. ಕಗ್ಗಟ್ಟಿನ ಸಂದರ್ಭ.. ಆದರೂ ಈಡೇರುತಿದೆ ಉದ್ದೇಶ..
ಅದೇ ಮೌನ.. ಅದೇ ಕವನ.. ಸಾರುತಿರುವೆ ನೂತನ ಸಂದೇಶ..
ಜೀವನವೆಂಬ ಈಜು ಕಲಿತ ಮೇಲೆ.. ಪುನಃ ನೀ ಎದುರಾಗಿರುವೆ..
ಹತೋಟಿಯಿಲ್ಲದ ಮನಸಲಿ ಮತ್ತೇ ಪ್ರೀತಿಯ ಚಿಗುರಿಸಿರುವೆ..
ಎದೆಬಡಿತ ಹೆಚ್ಚುತಿದೆ.. ಕಂಗಳ ಸಂಭಾಷಣೆ ನಡೆಯುತಿದೆ..
ಗೆಲುವಿನ ಕಳೆ ಮೊಗದಲಿ ಮೂಡುತಿದೆ.. ಒಲವಿನ ಮಳೆ ಸದ್ಯ ಶುರುವಾಗಿದೆ..

- sandesh

22 Jul 2018, 08:34 pm
Download App from Playstore: