ಹೌದು ನಾವು ಹುಡುಗರೇ ಹೀಗೆ
ನಾವು ಹುಡುಗರೇ ಹೀಗೆ ಗೆಳೆಯ,
ಎಲೆ ಮರೆಯ ಕಾಯಿಗಳ ಹಾಗೆ.
ಕಣ್ಣೀರ ತಡೆಯಲು ಪನ್ನೀರ ಕುಡಿವೆವು,
ಧಗೆಯನ್ನು ಹಿಡಿದಿಟ್ಟು ಹೊಗೆಯನ್ನು ಬಿಡುವೆವು,
ಉಷೆಯನ್ನು ಕೆಣಕದೆ ನಶೆಯಲ್ಲಿ ತೇಲುವೆವು,
ಪುಂಡ ಪೋಕರಿಗಳೆಂಬ ಬಿರುದೊಡನೆ ಬೀಗುವೆವು...
ಬಯಸಿದ ಬೆಡಗಿಗಾಗಿ ಬದುಕನ್ನೆ ನೀಡುವೆವು,
ಕಡೆಯಲ್ಲಿ ಅವಳಿಂದ ಚೊಂಬನ್ನು ಪಡೆವೆವು,
ಮನೆಯವರ ನೆಮ್ಮದಿಗೆ ಮೂರ್ಗಂಟು ಹಾಕುವೆವು,
ಹುಟ್ಟಿದ ಮಗುವಿಗೆ ಆ ನಲ್ಲೆಯ ಹೆಸರನ್ನೇ ಇಡುವೆವು.
ಹೌದು ನಾವು ಹುಡುಗರೇ ಹೀಗೆ,
ನಮಗೆ ಬೆಲೆ ಕೇವಲ ಕೈಯಲ್ಲಿ ಕಾಸಿರುವ ವರೆಗೆ,
ಇತರರಿಗೇ ದುಡಿವೆವು ಕಡೆಯುಸಿರ ವರೆಗೆ,
ನಮ್ಮದೇ ಕಥೆಯ ದುರಂತ ನಾಯಕರಾಗುವೆವು ಕಡೆಗೆ.
ಹೌದು ನಾವು ಹುಡುಗರೇ ಹೀಗೆ,
ಎಲ್ಲವನ್ನೂ ಎದುರಿಸಿ ಕೀರ್ತಿಯನ್ನೇ ಬಯಸದ ಹಾಗೆ,
ನಾವು ಹುಡುಗರೇ ಹೀಗೆ..........
- ನಾಗೇಶ್ ಎಸ್ ವೈ.
- ನಾಗು
25 Jul 2018, 08:23 pm
Download App from Playstore: