ಆಡಿದ್ದು ಸಾಕೊ
ಬಾನಾಗ ಚುಕ್ಕಿ ಮೂಡ್ಯಾವ
ಆಡಾಕ ಚಂದ್ರಮನ ಕರೆದಾವ
ನೋಡು ಬಾರಯ್ಯ ಅವರಾಟವ
ತಿನ್ನಲೀಕ ತಂದೀನಿ ಊಟವ
ಸೂರ್ಯ ಹೊಂಟು ಬಾಳೊತ್ತಾಯ್ತು
ಹಕ್ಕಿ ಚಿಲಿಪಿಲಿ ನಿಂತು ಎಷ್ಟೊತ್ತಾಯ್ತು
ಲತೆಯಲ್ಲರಳಿದ ಹೂವೂ ಬಾಡೋಯ್ತು
ಆಡಾಕ ನಿಂತ ನಿಂಗ ಲೋಕಾನೆ ಮರೆತೋಯ್ತು
ಹಿಂಡಿಂಡು ಗೆಳೆಯಾರು ಸೇರಿ
ಹಳ್ಳಕೊಳ್ಳದೊಳಗ ಹಾರಿ
ಊರೂರು ತಿರುಗಿ ಮರಗಳೇರಿ
ಆಡಿದ್ದು ಸಾಕೋ ಹಿಡಿ ಹಟ್ಟಿ ದಾರಿ
- ಶ್ರೀಕಾವ್ಯ
25 Jul 2018, 09:35 pm
Download App from Playstore: