ಬದುಕಿನ ಬಂಡಿ
ಸಲೀಸಾಗಿ ಸಾಗುತ್ತಿರುವ..!
ಬದುಕಿನ ಬಂಡಿ....
ಮಂಕುತನದಿಂದ ಕುಂಟಾಡದಿರಲಿ..!!
ತಲುಪುವ ಮುನ್ನ, ಗುರಿಯ ದಂಡಿ....
ಕಳಚುವರೄಾರೊ ಗೊತ್ತಾಗದು..!
ಬಂಡಿಯ ಕೊಂಡಿ......
ಕಳಚಿಕೊಂಡಾಗ ಅದಾಗುವುದು..!!
ಬ್ರೇಕಿಲ್ಲದ, ಜಾರು ಬಂಡಿ.......
ಎತ್ತ ನೋಡಿದರೂ..
ಬರಿ ತಗ್ಗು ಗುಂಡಿ...!
ಸುತ್ತಲೂ ಇರುವರು..
ಸಾವಿರಾರು ಮಂದಿ...!!
ಜಾರಿ ಬಿದದ್ದಾಗ..
ಗುಂಡಿಗೆ ಬಂಡಿ...!
ಸಹಾಯಕ್ಕೆ ಬರರು..
ಆ ಕೊಂಕು ಮಂದಿ...!!
- S Anju Doddmani
11 Aug 2018, 06:32 pm
Download App from Playstore: