ಪರಿಸರ ಈ ಪರಿಸರ ಸೌಂದರ್ಯದ ಆಗರ
ಪರಿಸರ ಈ ಪರಿಸರ ಸೌಂದರ್ಯದ ಆಗರ
ಹಸಿರು ಉಸಿರಿನ ಪರಿವಾರ
ಜೀವ ಸಂಕುಲದ ಉಳಿವಿಗೆ ಇರಲು
ಮನುಕುಲಕೆ ಮುದವನು ಕೊಡಲು
ಈ ಪ್ರಕೃತಿ ಮಾತೆಯು..." ಪ "
ಪರ್ವತ ಸಾಗರ ತೇಗ ಶ್ರೀಗಂಧವನು
ಹೂವು ಮಾವು ಹುಲಿ ಸಿಂಹವನು
ವಿಸ್ಮಯದಿ ಹರುಷದಲಿ ನೀ ನೋಡಲು
ಬನವಿಲ್ಲದೆ ಬಾಳು ಇಲ್ಲವೆಂಬ ನಿಜವ ನೀ ತಿಳಿದರೆ
ಈ ಪ್ರಕೃತಿ ಮಾತೆಯ ಪೂಜಿಸುವೆ ನೀ
ಆ ಸ್ವರ್ಗ ವೇ ಧರೆಗಿಳಿದಂತೆ ಭಾಸವಾಗುವೆ
ಈ ನಿಸರ್ಗವ ಈ ನಿಸರ್ಗವ....
ಹರಿಯುವ ನದಿಯಲಿ ಹರುಷದಲಿ ಈಜಾಡುತ ನೀ
ಚಿಲಿಪಿಲಿ ಹಕ್ಕಿಗಳ ನಿನಾದವ ಆಲಿಸುತ ನೀ..
ಈ ಪ್ರಕೃತಿ ಮಾತೆಯ ಸೌಂದರ್ಯಕೆ ಕರಗಿಹೋಗವೆ ,ಧನ್ಯನಾಗುವೆ..
ಖಗವೇ ಮೃಗವೇ ಇರಲಿ
ಗಿಡವೇ ಮರವೇ ಇರಲಿ..
ಈ ಪ್ರಕೃತಿ ಮಾತೆಯ ಮಡಿಲಲಿ ಬಾಳಿ ಬೆಳಗಲು
ಕರುಣೆ ತೋರು ನೀ
ಅದುವೇ ಸೃಷ್ಟಿಯ ನಿಯಮ ಎಂಬುದು ನೀ ಅರಿತುಕೋ.....
- ಸುರೇಶ್ ಟಿ ವಿ
12 Aug 2018, 03:46 pm
Download App from Playstore: