ಅವನು-ಅವಳು

ನಾನಿಂದು ಇವಳ ಕೈಸೆರೆ
ಮೋಹಕ ಮಿನುಗುವ ತಾರೆ
ಸ್ಥಬ್ಧ ನಾನೀಗ ಇವಳು ನಕ್ಕರೆ|ಹುಡುಗ|

ಯಾವುದಿದು ಮಾಯ ತೆರೆ
ಅವನ ಕಣ್ಣಲ್ಲಿ ಕಣ್ಣಿಟ್ಟರೆ
ಮಾಡಿದೆ ನನ್ನಿಂದ ನನ್ನನೇ ಬೇರೆ|ಹುಡುಗಿ|

ನನ್ನೆದುರು ಇವಳು ನಿಂತಿರೆ
ಸ್ವರ್ಗವೇ ಆಗಿದೆ ಈ ಧರೆ
ಇವಳೊಲವಿನಲಿ ನಾನೀಗ ಸೆರೆ|ಹುಡುಗ|

ಇವನ ಕೈ ಹಿಡಿದು ನಡೆದರೆ
ನಾನಾದೆನು ಕಣ್ಣೀರಿಗೂ ಹೊರೆ
ಇದಕ್ಕಿಡಲೆ ಪ್ರೀತಿಯ ಹೆಸರೇ??|ಹುಡುಗಿ|

ಅವಳ ಮಡಿಲ ನಾ‌ ಸೇರೆ
ಜಗಕೆಲ್ಲ ನಾನೇ ದೊರೆ
ಈ ಪ್ರೀತಿಯ ಅಮಲು ಜೋರೆ|ಹುಡುಗ|

ಇವನ ತೋಳ ಆಸರೆ
ನನಗೆಂದೇ ನೀಡಿದ ದೇವರೆ
ನಿನಗಿದು ವಂದನೆ ಮನಸಾರೆ|ಹುಡುಗಿ|

- ಶ್ರೀಕಾವ್ಯ

30 Aug 2018, 11:31 pm
Download App from Playstore: