ಋಣ ಸೇವೆ
ನೆಲ- ಜಲದ, ಹಗಲಿರುಳ, ತುಡಿತದಿಂದುದುಸಿ
ದೇಶಾಭಿಮಾನದ ಸ್ರುಜನ ಜನ, ಜನಿಸಿ
ವನ - ಲತೆಗೆ,ಮೃಘ-ಖಗಕೆ,ದಯೆ,ಕರುಣೆ ಇರಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಿಸಿ ||2||
ಜೀವ- ಜಲದೊಳಗೆ, ಜುಳು-ಜುಳುನೆ ಹರಿಸಿ
ನರನಾಡಿಯೊಡಲೊಳಗೆ, ನುಡಿಪ್ರೇಮನುಳಿಸಿ
ತಾಯ್ನಡಿಯ ಋಣಸೇವೆ ಗಾನಸುಧೆ ಹರಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಿಸಿ ||2||
ಗಿಡ-ಮರದ ತಂಗಾಳಿ ಉಸಿರಾಗಿ ಚಲಿಸಿ
ಸತ್ಯದಿ, ಶಾಂತಿ ಜೊತೆ ತ್ಯಾಗ ಸರಿ ಬೆರಸಿ
ತಾಯ್ನಾಡ ಉಸಿರಾಗಿ, ಮತ್ತದುವೆ ಪುಟಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಸಿ ||2||
ರವಿ-ಶಶಿಯ ಹೊಂಗಿರಣ ಬೆಳಕಾಗಿ ತಲುಪಿ
ನಿಸ್ವಾರ್ಥ,ಸಹಬಾಳ್ವೆ ಜನ-ಮನದಿಮೆರೆಸಿ
ಸರತಿಯಲಿ,ಕನ್ನಡತಿ ಅಗ್ರಳೆಂದೆನಿಸಿ
ನಿತ್ಯ ಚೇತನಗೊಳಲಿ ಕನ್ನಡವು ಕಂಪ ಹರಸಿ ||2||
- ಕುಂತೂರು ತ ಸುಬ್ರಹ್ಮಣ್ಯ
9482119447
- KT Subramanya
31 Aug 2018, 06:54 pm
Download App from Playstore: