ಕಣ್ಣು ಕಣ್ಣಲ್ಲಿ
ಕಣ್ಣು ಕಣ್ಣಲ್ಲಿ ಕಣ್ಣಿಟ್ಟು ಕರೆದವನ ಕವಿತೆ ಇದು
ಕಾಡುತ್ತ ಕರೆಯುತ್ತ ಬೆಂಬಿಡದೆ ಹಾಡುತಿದೆ
ಮನದಲ್ಲೇ ನನ್ನಯ ರೇಖೆಗಳ ಬಿಡಿಸಿದ
ಕಣ್ಣಲ್ಲೇ ಬಣ್ಣಗಳ ಜೀವವ ತುಂಬಿದ
ನಾನಂತೂ ಅವನನ್ನು ಈ ಹಿಂದೆ ಕಂಡಿಲ್ಲ
ನನ್ನನ್ನು ಅವನೀಗ ಅತಿಯಾಗಿ ಅರಿತಿರುವ
ಕಲ್ಪನೆಯ ಕವಿಯು ಅವನೇನು ಅಲ್ಲ
ನಿಜವಾದ ನನ್ನನ್ನೇ ಕನ್ನಡಿಗೆ ತೋರಿದ
ಕನ್ನಡದ ಕನ್ನೆಯ ಕವಯತ್ರಿ ಮಾಡಿದ
ಲೇಖನಿಗೆ ವರ್ಣನೆಯ ವರ್ಣ ವ ತುಂಬಿಸಿ
ನಲ್ನುಡಿಯ ಅಕ್ಕರದ ಮಾಲೆಯ ತೊಡಿಸಿದ
ಮಳೆ ಮೋಡ ಕಂಡಂತ ನವಿಲ್ ಆದೆ ನಾನಾಗ
ದಾಂಪತ್ಯ ರಸ ಸವಿಯೇ ಮೊದಲಾದ ಅವನಾಗ
- kempukanda
01 Sep 2018, 11:33 pm
Download App from Playstore: