ಕನಸ ಕೊಂದರೆಲ್ಲ
*ಕನಸ ಕೊಂದರೆಲ್ಲ*
ಮೋರಿ ನೀರಿಗೂ ಮೋಹ ಬಂದಿದೆ
ತನ್ನೊಳಗೂ ತಾವರೆ ಅರಳಲಿ ಎಂದು
ಆದರೇಕೋ ಒಂದು ಜೀವವೂ
ಬಯಸದು ನನ್ನ ಸ್ನೇಹ ಬೇಕೆಂದು
ಊರಿನ ಎಲ್ಲಾ ಕೊಳೆಯ ಹೊತ್ತು
ಬಂದುದೇ ನನಗೆ ಬಾರಿ ಕುತ್ತು
ಹಿಂದೆ ನಾನು ಕೂಡ ಚಂದವಿದ್ದೆ
ಬಳಸಿ ಬಳಸಿ ನಾನು ಕೊಚ್ಚೆಯಾದೆ
ನನ್ನ ಬದುಕನೇ ನಾಶ ಮಾಡಿ
ಮೂಗು ಮುಚ್ಚಿಕೊಂಡು ನಡೆವರು
ಹಂದಿಗೊಂದೇ ನಾನು ಇಷ್ಟ
ಇನ್ಯಾರೂ ಕೇಳರು ನನ್ನ ಕಷ್ಟ
ಕಪ್ಪು ಬಣ್ಣವ ಮೈಗೆ ಮೆತ್ತಿಕೊಂಡು
ಎಲ್ಲೋ ಹರಿದು ಹೋಗಿ ನಿಂತು
ಸುತ್ತಲೆಲ್ಲ ಗಬ್ಬು ನಾತ ಬೀರುವೆನೆಂಬ
ಅಪಕೀರ್ತಿ ಮಾತ್ರ ನನಗಂಟಿದೆ
ನನ್ನ ಕನಸ ಕೊಂದರೆಲ್ಲ
ನಾಗರೀಕರೆನಿಸಿಕೊಂಡವರು
ನನ್ನ ಗುಣವ ಅವಗುಣವಾಗಿಸಿ
ಆ ಸೇವೆಯನ್ನು ಗೌಣವಾಗಿಸಿದರು
ನನಗೂ ಕೂಡ ನ್ಯಾಯ ಕೊಡಿಸಿ
ಎಲ್ಲರೊಂದಿಗೂ ನಾನಿರಬೇಕು
ನನಗೆ ಈ ನರಕ ಬೇಡ
ನನ್ನ ದೂರುವವರ ನಾ ಸೇರಬೇಕು
0858ಎಎಂ19092018
*ಅಮು ಭಾವಜೀವಿ*
ಚಿತ್ರದುರ್ಗ
- ಅಮು
19 Sep 2018, 11:53 am
Download App from Playstore: