ಕಳ್ಳತನ
ಯಾರಿಗುಂಟು ಯಾರಿಗಿಲ್ಲ
ಬಲ್ಲವರಾರು ಇದರ ಮೂಲ
ಎಲ್ಲ ತಿಳಿದವ ಕುಂತಿಹನು ಮೇಲೆ
ನಿರ್ಧರಿಸುತ್ತ ಎಲ್ಲರ ಕಾಲ
ನೂರಾರು ವಿಷಯ
ತಿಳಿಯುತ್ತಿದ್ದೆ
ನೂರಾರು ಭಾಷೆಯ
ಕಲಿಯುತ್ತಿದ್ದೆ
ಕೈಗನ್ನಡಿಯಂತಿದ್ದೆ
ನೀನು ನನ್ನ ಅಂಗೈಲಿ
ಎಲ್ಲಿ ಮರೆಯಾದೆ
ಎವೆತೆರೆದಿಕ್ಕುವೇಳೆಯಲಿ
ಕದ್ದವರ ಕಣ್ಣಲ್ಲಿ
ಸಂತಸದ ಸಲ್ಲಾಪ
ಕಳಕೊಂಡವರ ಕಣ್ಣಲ್ಲಿ
ಹೊಮ್ಮುತ್ತಿದೆ ಹಿಡಿ ಶಾಪ
ಇಂದಲ್ಲ ನಾಳೆ ಕದ್ದವರು
ಉಣ್ಣರೆ ಪಶ್ವಾತ್ತಾಪ
ಶಾರದ
- seenu
21 Sep 2018, 10:10 pm
Download App from Playstore: