ಅಪರೂಪದ ಮಾತುಗಾತಿ
ಅಪರೂಪಕ್ಕೊಮ್ಮೆ ಮಾತನಾಡುವ ಗಿಳಿಯೇ,
ಅರಳಿಸಿ ಮನದಿ ಕೆಂದಾವರೆಯ
ಮರಳಿ ಮರೆಯಾಗಿ ಬಿಡುವೆಯಲ್ಲ,
ನಗುವಿನ ಹೂ ಗಿಡಕೆ ನೀರೆರೆವವರು ಯಾರಿಲ್ಲದೇ
ಮತ್ತೆ ಬಾಡುವುದೆಂಬುದನು ಮರೆತು...
ನಿನ್ನ ನಗುವಿನೊಳಗೆ ಹುದುಗಿಹುದೇನೋ
ನನ್ನ ಮನದೊಳಗಣ ಸಿಹಿಯ ಗುಟ್ಟು
ನಿನ್ನ ಮಾತಿನ ಮೋಡಿಯೊಳಗೆ ಬಂದಿಯಾಗಿ
ಮರೆತೇನೆ ನಾನು ಎಲ್ಲಾ ಕಹಿಯ ಒಟ್ಟು.
ಗೆಳತಿ ನೀನು ಆಗಿರುವೆಯ ಅಮಂತ್ರಣವಿಲ್ಲದೆ
ನನಗೆ ಮಮತೆಯ ಕೇಡಿ
ಅರಿವ ಮುನ್ನವೇ ಗೆಳೆತನದ ಅನಿಸುಗಳ
ಬಾವಿಗೆ ಮೆಲ್ಲಗೆ ದೂಡಿ..
ನಗುತಿರು ಹೂವೆ ಕಾಲ ಬದಲಾದರೂ
ಅರಳುತಿರಲಿ ದಿನವೂ ನಿನ್ನ ತುಟಿಯಲ್ಲಿ
ಸದಾ ಮುಗುಳ್ನಗೆಯ ಮೊಗ್ಗು.
ಬಿಕ್ಕಳಿಕೆ ಬಂದಾಗಲಾದರೂ ನೆನೆಸಿಕೊ ನನ್ನ
ಕೆಲಸವಿಲ್ಲದ ಬಡಗಿ ನೆನೆಯುತಿರುವನೆಂದು ನಿನ್ನ !
- ಶ್ರೀಗೋ.
22 Sep 2018, 10:06 pm
Download App from Playstore: