ನೆನಪುಗಳು ಹಾಡಲು

ನನ್ನೆದೆಯ ಬಿಸಿಯುಸಿರ
ನಗುತಲೆ ತಣಿಸುವ
ಕತ್ತಲಲೂ ನಲಿಯುವ
ಮುದ್ದು ಮೊಗದ
ಹೊಳೆವ ಚಂದಿರನೇಕೊ
ಮಂಕಾಗಿದ್ದಾನೆ .....

ಅವನ ಸುತ್ತಲೇ ಇರುವ
ಒಡನಾಡಿ ಚುಕ್ಕಿಗಳು
ಕಾಣದೇ ಏತಕೋ ಮರೆಯಾಗಿವೆ
ಏನಾಯಿತೋ ಯಾಕಾಯಿತೋ
ಅವನೊಟ್ಟಿಗೆ ಅವುಗಳು ಮುನಿದಿರಬೇಕು

ಇಲ್ಲ ನನ್ನೊಳಗೆ ಹುಡುಕಿದರೂ
ಸಿಗದೆ ಕಾಣದಾಗಿದೆಯೇನೊ ಕತ್ತಲು
ಅವನ ಚೆಲುವ ಮೊಗವ ನೋಡಲು
ನೆನಪುಗಳು ಎದೆಯೊಳಗೆ ಹಾಡಲು

- ಶ್ರೀಕಾವ್ಯ

24 Sep 2018, 09:01 pm
Download App from Playstore: