ಇಳಿ ಸಂಜೆ

ಇಳಿ ಸಂಜೆಯಲ್ಲಿ ಸಿಗು ಗೆಳತಿ...
ನನ್ನೆದೆಯ ಮಡುಮೌನ ನಿನ್ನೆದುರು ಮಾತಾಗಲಿ,
ಇಳಿ ಸಂಜೆಯಲಿ ಸಿಗೇ ಗೆಳತಿ...
ನಿನ್ನಕಂಡು ಸೂರ್ಯನ ಕೆನ್ನೆಯು ಕೆಂಪಾಗಲಿ,
ನಿನ್ನದರವ ಸೋಕುವ ಗಾಳಿಗು ವಿರಹದ ಅರಿವಾಗಲಿ,
ಇಳಿ ಸಂಜೆಯಲೇ, ಸಿಗೇ ಗೆಳತಿ...
ನಿನ್ನುಸಿರು ಸೋಕಿ ಎದೆಬಡಿತವೂ ಏರುಪೇರಾಗಲಿ,
ಜಗಮರೆತು ನೋಟಬೆರೆತು ಕನಸ್ಸಗಳು ಮೆಾಗ್ಗಾಗಲಿ,
ತಬ್ಬಿಕೂ, ಒಮ್ಮೆ ಜಗನಾಚಿ ಕತ್ತಲಾಗಲಿ,
ಇಳಿ ಸಂಜೆಗು ಮುಕ್ತಿಸಿಗಲಿ,,,
ಇಳಿ ಸಂಜೆಯಲೇ, ಸಿಗೇ ಗೆಳತಿ........

- santhosh

28 Sep 2018, 08:37 am
Download App from Playstore: