ಸುಪ್ತ ಸುಂದರಿ..

ಎಂತ ಸೊಗಸು ಸುಂದರಾಂಗಿ
ಅರಳು ಕಂಗಳ ಮೋಹನಾಂಗಿ
ಮರುಳು ಮಾಡುವಂತ ನೋಟ
ಮರಳಿ ಕಾಡುವಂತ ಮಾಟ..

ದುಂಬಿ ಗೂಡಿನಂತೆ ಕಣ್ಣು
ಸೆಳೆದು ಮೋಹಗೊಳಿಸುವಂತ ಹೆಣ್ಣು
ಬೆಣ್ಣೆ ಮುದ್ದೆಯಂತ ಕೆನ್ನೆ
ಎಣ್ಣೆ ತೀಡಿದಂತ ಮೂಗು
ಕೆಂದಾವರೆಯ ಎಸಳು ತಂದು
ಮಾಡಿದಂತ ಕೆಂದುಟಿಯು
ಯೌವ್ವನದ ರಸ ಜೇನ
ಸ್ಪುರಿಸುತಲಿ ಮೀನುಗಿಹುದು

ಕಣ್ಣ ಕುಲುಮೆಯೊಳಗೆ
ಬೇಯುತಿರುವ ವಿರಹದಾಸೆ
ಹೆಣ್ಣ ಮನದ ಮಹಲಿನೊಳಗೆ
ಹಣ್ಣಾಗಿರುವ ಸುಪ್ತ ಆಸೆ...

- ಶ್ರೀಗೋ.

29 Sep 2018, 06:57 am
Download App from Playstore: