ತಂದೆ

ತೀರಿಸದಾದೆ ತಂದೆ ನಾನು
ನಿನ್ನಯ ವಾತ್ಸಲ್ಯದ ಋಣವ!!
ನೋಯಿಸದಾದೆ ತಂದೆ ನಾನು
ನಿನ್ನಯ ಪ್ರೀತಿಯ ಮನವ!!

ಹೆಗಲ‌ ಮೇಲೆ ಇರುವ ಸ್ವರ್ಗ
ಮರೆತರೆ ನಾ ಇರುವೆನೇನು!!
ಕನಸನೆಲ್ಲ ನನಸು ಮಾಡೋ
ನಿನ್ನ‌ ಹರುಷ ನಾನೇಯೇನು!!

ಬರವಸೆಯ ಬೆಳಕ ತೋರಿ
ಬದುಕ ದಾರಿ ಸರಳ ಮಾಡಿ!!
ಇರುಳಿನಲ್ಲಿ ಬೆರಳ ಹಿಡಿದು
ನಡೆಯುವಾಗ ನೀನು ಜೋಡಿ!!

ಮಾತಿನಲ್ಲಿ ಸಿಹಿಯ ಇರಿಸಿ
ನುಡಿಯುವೆ ನೀ ಕಹಿಯ ಮರೆಸಿ!!
ಸಣ್ಣ ತಪ್ಪನ್ನೂ ಸನ್ನೆಯಲ್ಲೇ
ತಿದ್ದಿ ಹೇಳಲು ನೀನು ಬಲ್ಲೆ!!

ನಿನ್ನ ಶ್ರಮದ ಬದುಕಿನಲ್ಲಿ
ನನ್ನ ಖುಷಿಗೆ ಬೆಳಕ ಚೆಲ್ಲಿ!!
ಬೆಳೆದರೂ ನಾ ಹೆಮ್ಮರವಾಗಿ
ಇರುವೆ ನೀ ನನ್ನ ನೆರಳಾಗಿ!!

- ಪಿ.ಜಿ.ಜ್ಯೋತಿ

30 Sep 2018, 07:05 am
Download App from Playstore: