ಕರ್ನಾಟಕ ರಕ್ಷಣಾ ವೇದಿಕೆ

"-ಕರ್ನಾಟಕದಲ್ಲಿ -ಕನ್ನಡಿಗನೇ -ಸಾರ್ವಭೌಮ"

ಭುವನೇಶ್ವರಿಯ ಒಡಲಲಿ ಹುಟ್ಟಿರುವುದಕ್ಕೆ ಹೆಮ್ಮೆಪಡುವೆ ಕನ್ನಡಿಗನಾಗಿ
ಏಳೇಳು ಜನ್ಮಗಳಲ್ಲಿಯೂ ಇಲ್ಲಿಯೆ ಬದುಕಲೆಂದು ಇಚ್ಚಿಸುವೆ ಕನ್ನಡಿಗನಾಗಿ

ನೋಡುತ್ತ ಹೋದಂತೆ ಹೆಚ್ಚಿಸಿಕೊಳ್ಳುವಳು ತನ್ನಂದವ ಕನ್ನಡತಾಯಿ
ಕರುನಾಡ ಮಾತೆಯ ಅಮೃತವ ಕುಡಿದು ಬದುಕು ಸಾಗಿಸುವೆ ಕನ್ನಡಿಗನಾಗಿ

ಶಿಲ್ಪಕಲಾ ಕಣಜವು ಕರೆತರುವುದು ಅಸಂಖ್ಯ ದಾರ್ಶಾನಿಕರನು ಪ್ರತಿವರ್ಷ
ಅವರಾಡುವ ಕೀರ್ತಿಯ ಮಾತುಗಳ ದೂರದಿ ನಿಂತು ಕೇಳಿಸಿಕೊಳ್ಳುವೆ ಕನ್ನಡಿಗನಾಗಿ

ಪ್ರೀತಿಯ ಬಾಂದವ್ಯದಿ ಸಾಗರದಂತೆ ಮುನ್ನುಗುವರು ಸಪ್ತಕೋಟಿ ಮಕ್ಕಳು
ಹೆಸರುಳಿಸಲು ನನ್ನ ಪ್ರಾಣವನೆ ಪಾದಕಿಟ್ಟು ಶ್ರಮಿಸುವೆ ಕನ್ನಡಿಗನಾಗಿ

ಎಷ್ಟು ಹಾಡಿದರು ಮುಗಿಯದ ಇತಿಹಾಸ ನನ್ನವ್ವ ಕನ್ನಡತಿಯದು
ನಿಮ್ಮ ಚರಣದಡಿಯ ಧೂಳಂತೆ ನಂರುಶಿಯೊಡನೆ ಬದುಕುವೆ ಕನ್ನಡಿಗನಾಗಿ.

"ಮಹೇಶ್ ಮೂಡಿಗೆರೆ"

- BenakaTaxi

18 Oct 2018, 11:10 pm
Download App from Playstore: