*ಗೆಳೆಯ ನಿನಗೂ ಇರಬಹುದು*

ಗೆಳೆಯ ನಿನಗೂ ಇರುತ್ತಾನೆ
ಇಂದಲ್ಲ ನಾಳೆಯೂ ಬರಬಹುದು
ಹಸಿವು ಬಾಯಾರಿಕೆಯ ಪರಿವನ್ನು ಮರೆತು
ನಿನ್ನ ಗೆಜ್ಜೆಯ ಸದ್ದನು ಅರಸುತ್ತಿರಬಹುದು!

ನಿನ್ನ ಕಣ್ಣ ಹನಿಗಳ ಸಾಲುಗಳು
ಅವನ ಪಾದಗಳ ಸುತ್ತೆಲ್ಲ ಸುಳಿದಾಡಿ
ಕಮರಿಹೋದ ಆಸೆಗಳ ಬಡಿದೆಬ್ಬಿಸಿ
ಆತ್ಮವಿಶ್ವಾಸದ ಹಸಿವನ್ನು ಉಣಬಡಿಸುತ್ತಿರಬಹುದು!

ಕಾಮನಬಿಲ್ಲಿನ ಜೊತೆ ನಿನ್ನಂದವ ಹೊಗಳುತ್ತಾ
ಹೂವಲ್ಲಿ ನಿನ್ನೆಸರನು ಬರೆಯುತ್ತಿರಬಹುದು
ಹೃದಯದಂಗಳದಲಿ ಬೃಂದಾವನವ ನಿರ್ಮಿಸಿ
ಉಯ್ಯಾಲೆಯಲಿ ನಿನ್ನ ತೂಗುವ ಕನಸು ಕಾಣುತ್ತಿರಬಹುದು!

ಅವನ ನೆನಪಲ್ಲೇ ವರುಷಗಳು ಕಳೆದಾಗ
ತಂದೆ-ತಾಯುಯರ ಪ್ರೀತಿಯ ಬಲವಂತಕ್ಕೆ ಮಣಿದು
ನೀನು ತಾಳಿಗೆ ಕೊರಳೊಡ್ಡುವ ದಿನದಿಂದು
ಮರೆಯಲ್ಲಿ ನಿಂತು ಹರಸಿ ಅಳುತ್ತಿರಬಹುದು!

✍ ಪ್ರಿಯಾಂಕ

- ಪ್ರಿಯಾಂಕ

24 Oct 2018, 10:58 am
Download App from Playstore: