ಕೆಂದಾವರೆಯ ಮೊಗದಿ..
ಕೆಂದಾವರೆಯ ಮೊಗದಿ
ಮಂದಹಾಸದ ಮಹಲು
ಚೆಂಗುಲಾಬಿಯ ಎಸಳು
ತುಟಿಯಾಗಿ ಸೆಳೆದಿಹುದು
ಸಂಪಿಗೆ ಹೂವಿನೆಸಳ
ಮೂಗಿನ ತುದಿಯಲಿ
ಮುದ್ದಾಗಿ ಇಟ್ಟವರ್ಯಾರೆ
ಚಿಕ್ಕ ಮುಗುನತ್ತ ?
ಸೊಬಗಿನ ಕಂಗಳೋ
ಸವಿಕಾಮನೆಗಳ ಬಟ್ಟಲು
ಸುರಿದು ಸ್ಪುರಿಸುತಲಿಹವು
ಅಗ್ನಿದಿವ್ಯ ಪ್ರೀತಿಯ
ಕವಿ ಮನಸು ಅರಳು ಮರುಳು.
ಬೆಡಗಿನ ಕಣ್ಣವಳೇ
ಸೊಬಗಿನ ಮೊಗದವಳೇ
ಮಂದಾರ ತುಟಿಯಲೇನೆ
ನಗೆಯ ಮಿಂಚು!
ನಗುವಿನ ಶಿಲೆ ಇವಳೇ
ಮಗುವಿನ ಮನಸವಳೇ
ಹೊಂಗನಸ ತೊಟ್ಟಿಲಲಿ
ಆಡುತಿಹಳು.
ಬಾನಿಂದ ಬಿದ್ದ ಉಲ್ಕೆಯನು
ಜೋಪಾನವಾಗಿ ಹೆಕ್ಕಿ !
ತುಟಿ ಮೇಲಿನ ಕೆನ್ನೆಯಲಿ ತಂದು
ಯಾರಿಟ್ಟರೋ ಪುಟ್ಟ ಚುಕ್ಕಿ.
- ಶ್ರೀಗೋ.
29 Oct 2018, 06:37 am
Download App from Playstore: