ನನ್ನ ಚೆಲುವೆ

ಆಚೆಯಾ ಊರಾಗ,
ಅಲ್ಲಿರುವೆ ನೀ ಚೆಲುವೆ..
ಮಾತಾಡೋಣೆಂದರೆ ಮನೆ ದೂರ...!
ಮಾತಾಡೋಣೆಂದರೆ ಮನೆ ದೂರ ಇರಲಿ ಚಿನ್ನ..
ಮನಸಿನ ಮನೆ ಮಾತ್ರ ಬಲು ಹತ್ತಿರ...!!

ಗೆಜ್ಜೆಯ ಹಾಕೊಂಡು,
ಹೆಜ್ಜೆಯ ಹಾಕುತ್ತಾ..
ಸಜ್ಜಾಗಿ ಬರುತೀದಿ ಕನಸಿನಲಿ...!
ಸಜ್ಜಾಗಿ ಬರುತೀದಿ ಕನಸಿನಲಿ ನನ್ನ ಚೆಲುವೆ..
ಕುದ್ದಾಗಿ ಬರಬಾರ್ದೆ ಮನಸಿನಲಿ...!!

- S Anju Doddmani

05 Nov 2018, 11:22 pm
Download App from Playstore: