ನಂದಾದೀಪ

ಕೊನೆಯುಸಿರ ಬಿಗಿ ಹಿಡಿದು ಕೊರಗುತ್ತಿದೆ
ನಂದಾದೀಪ ನಾಂದಿ ಹಾಡಲೆಂದು ತನ್ನ ಈ ಪುಟ್ಟ ಜೀವನಕೆ.

ಎಲ್ಲಿಂದ ಆಯ್ದು ತಂದ ಮಣ್ಣೊ ಯಾವ ಮೇಘ ಹಿಡಿದಿಟ್ಟ ಹನಿಯೋ ಯಾರ ಕೈಯಲ್ಲಿ ಕೇಸರಾಗಿ ಆಕೃತಿ ಪಡೆದಿದೆಯೋ ಸುಟ್ಟು ಬೆಂಕಿಯಲ್ಲಿದ್ದು ಗಟ್ಟಿಯಾಗಿ ಈ ಮಣ್ಣಿನ ದೀಪ.

ತಾ ಬಿತ್ತದ ಬೀಜ ಹತ್ತಿಯಾಯಿತು ಬಿಡದೆ ಬಿಟ್ಟು ಗಿಡವ ಬತ್ತಿಯಾಯಿತು, ನೀರೆರೆಯದೆ ಬೆಳೆದ ತೆಂಗು ಎಣ್ಣೆ ನೀಡಿತು ಯಾರದೋ ಅರಕೆಗೆ ತಾ ಆರತಿಯಾಯಿತು.

ಗಾಳಿಯ ಬೇಡಿ ಎಣ್ಣೆ ಮುಗಿದರೂ ಇನ್ನು ಸ್ವಲ್ಪ ಹೊತ್ತು ಉಸಿರಾಡುವ ಆಸೆ ಸಿಗಬಹುದೇ ಅವಕಾಶ ಮತ್ತೆ ಜೀವ ಪಡೆಯಲು ಈ ನಂದಾದೀಪಕೆ!!

- ಚುಕ್ಕಿ

09 Nov 2018, 05:04 pm
Download App from Playstore: