ಮೌನ

ಏನೋ ಚಿಂತೆ
ಏನೋ ವ್ಯತೆ
ಏನನ್ನೊ ಬೇಡುತಿದೆ
ಹೇಳಿಕೊಳ್ಳಲಾಗದಂತಿದೆ
ಮೌನವೆ ಮದ್ದಾಗಿದೆ

ಕದಡಿದ ನೀರ್ಗೊಳದಂತೆ
ಮುದುಡಿದ ಮಲ್ಲಿಗೆಯಂತೆ
ಸಿಹಿಯು ಕಹಿಯಾದಂತಿದೆ
ಏಕಾಂತವ ಬಯಸಿದೆ
ಮೌನವೆ ಮದ್ದಾಗಿದೆ

ಸಂಗಾತಿಯೊಡನೆ
ಮೂಡಿದ ವಿರಸ
ಬೆಂಗಾವಲಿನಂತೆ
ಬರುತಿದೆ ದಿವ-ದಿವಸ
ಬಿಡಿಸಲಾಗದ ನಂಟು
ಸಡಿಲಿಸದ ಮೊಂಡು
ಮೌನವೆ ಮದ್ದಾಗಿದೆ


ಅತೃಪ್ತತೆ ಅಧಿಕವಾಗಿ
ಸಂತೃಪ್ತಿ ಮರೆಯಾಗಿ
ಮೌನವೆ ಮರವಾಗಿದೆ


ಶಾರಧ

- ಶಕುಂತಲಾ

09 Nov 2018, 10:03 pm
Download App from Playstore: