ಅಪ್ಪಾ..
ಕಿರು ಬೆರಳ ತುದಿ ನನ್ನ ಕೈ ತುಂಬಿ ಮುನ್ನಡೆಸಿದ ಕ್ಷಣ ಮರೆಯುವುದು ಹೇಗೆ ನಾ ಚಿರಋಣಿ ಅದರ ಅಕ್ಕರೆಗೆ ಅಪ್ಪ.
ನನ್ನ ಪುಟ್ಟ ಪಾದ ನಡೆದಾಡಿದ ನಿನ್ನ ಎದೆಯ ಅಂಗಳಕೆ ಅನಿವಾಸಿ ಇಂದು ನಾನು, ನಿನ್ನ ಎದೆ ಬಡಿತ ಇನ್ನೂ ಮುನ್ನಡೆಸುತಿದೆ ಪ್ರತಿ ಹೆಜ್ಜೆಗೂ ಮುನ್ನೆಚ್ಚರಿಕೆ ನೀಡಿ ನಿಧಾನಿಸು ಮಗಳೇ ಹೆಜ್ಜೆ ಹಾಕುವ ಮುನ್ನ ಯೋಚಿಸು ಎಂದು.
ಅಂಜಿಕೆಯು ನೀನು ಅಭಯವೂ ನೀನು ಆರೈಕೆ ನೀನು ಧೈರ್ಯವೂ ನೀನೇ ಅಪ್ಪ ಒಂಟಿಯಲ್ಲ ನಾನೆಂದೂ ನೀ ನನ್ನ ನೆರಳಾಗಿ ಕಾಯುತ್ತಿರುವವರೆಗೂ.
ಜಗವಿಡೀ ನನ್ನ ತೊರೆದರೂ ನಿನ್ನೆಡೆಗೆ ಕೈ ತೋರುವೆ ನನಗಾಗಿ ನೀನಿರುವೆಯೆಂದು ನೀ ನನ್ನ ಜಗವೆಂದು ಬೇರ್ಯಾರ ಪ್ರೀತಿ ಬೇಡವೆಂದು ಬೇಕೆಂದು ನಾ ಬೇಡೆನೆಂದು.
- ಚುಕ್ಕಿ
10 Nov 2018, 10:40 am
Download App from Playstore: