ತವಕ
ನೋಡಲು ತುಡಿವುದು ಮನ
ನಿನ್ನ ಅನುಪಸ್ಥಿತಿಯಲಿ,
ಒಳ ಹೃದಯದ ಪಟಲದಲಿ ಅಚ್ಚುಕಟ್ಟಾಗಿ
ಕುಂತಿಹುದು ನಿನ್ನ ಮುಖಪಟ
ಅಳಿಸಲಾಗದ ಎರಕ ಹುಯ್ದಂತೆ
ಲೋಹದ ಗಟ್ಟಿ ಹಲಗೆಯ ಮೇಲೆ!
ಬೆಟ್ಟದಾ ತುದಿಯ ನೆಲ್ಲಿಮರ
ಬಾಡಿಹುದು ಗೆಳತಿ
ನಿನ್ನ ನಲ್ನುಡಿಯ ಸೊಲ್ಲಿಲ್ಲದೆ,
ಬಿಸುವಾಗಿ ಬಿಸುತಿಹ ತಂಗಾಳಿ
ತಂದೊಡ್ಡಿಹುದು ನಿನ್ನೊಲುಮೆ
ಸಿಹಿ ನೆನಪುಗಳ ಮೂಟೆಯನ್ನು,
ಬಿಚ್ಚಿ ಸವಿಯಲೆನೋ ಅಳುಕು
ಮನಸು ಮತ್ತೆ ರಚ್ಚೆ ಹಿಡಿದು ಬಿಡುವುದೇನೋ
ನಿನ್ನ ಹೊಸ ದನಿಯ ಕೇಳಲೆಂದು!
ನೇಸರನು ಉದಯಿಸಿ
ಕಾಯುತಿರುವನು,
ಸೂರ್ಯಕಾಂತಿಯ ಹೂವು
ಯಾಕಿನ್ನೂ ಅರಳಿಲ್ಲವೆಂದು..
ಹೂವ ಕಾಣದೆ ನಲಿಯದು ದುಂಬಿ,
ಯಾವಾಗ ನಲಿವ ಹೂವು ಮೈದುಂಬಿ
ನಗೆ ಬಿರುವುದೋ!
- ಶ್ರೀಗೋ.
13 Nov 2018, 07:40 am
Download App from Playstore: