ನಾ ನಿನಗ ಪ್ರಿಯವೆ
ನಾನೊಬ್ಬ ಮರುಳ
ನೆಚ್ಚಿಕೊಂಡೆನು ಕನಸ
ನನಸಾಗದನುದಿವಸ
ಪ್ರಾಸಗಳ ಸಾಲುಗಳ
ಗೀಚಿದೆನು ಹಾಳೆಯಲಿ
ಇದುವರೆಗೂ ಓದಿಲ್ಲ
ಮನಸಾರೆ ಯಾರೂ
ಓದಿದರು ನನ್ನಠದ
ಕೋರಿಕೆಗೆ ಕೆಲವರೂ
ಬೇಕು, ಬೇಡದ ಭಾವ
ಮೂಡಲವು ಪುಗಸಟ್ಟೆ
ಅವುಗಳಾ ಸಹವಾಸ
ಮಾಡಿನಾ ಅತಿ ಕೆಟ್ಟೆ
ನಾ ಕೆಡದ ಒರೆತಾಗಿ
ನಿಮಗೂ ಸಹ ಥೋ ಹೋಗಿ
ನನ್ನ ಮರುಳಿನ ಕವನ
ಹೇಳಿದೆನು ಬಹುವಾಗಿ
ಉದ್ಯೋಗ ಕೆಡಿಸುತಿದೆ
ಉದ್ದೇಶ ಏನಿದಕೆ
ಈಗೇಕೆ ಮೈದುಂಬಿ
ಪೀಡಿಸಿದೆ ದಿನೆದಿನಕೆ
ಬರೆಸುವುದು ನನ್ನಿಂದ
ಓದುವವರಾರಿಲ್ಲ
ಹಾಡಿಸುವುದೆನ್ನಿಂದ
ಕೇಳುವವರಾರಿಲ್ಲ
ನನಗೇಕೆ ನೀ ಒಲಿದೆ
*ನಾನಿನಗೆ ಪ್ರಿಯವೇ*
ಹೋಗ್ಲಿ ಬಿಡು ಏನ್ ಮಾಡ್ಲಿ
ನನ್ ಕರ್ಮ ಇದುವೇ
ಮಧುಕೇಶವ್.ಎಂ.ಗಡೀಹಳ್ಳಿ
9686617840
- Rapper Boy Madhukeshav
15 Nov 2018, 04:31 am
Download App from Playstore: